ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹ, ಇಬ್ಬರ ಬಂಧನ..!
ಜಂಟಿ ದಾಳಿಯಲ್ಲಿ ಆಹಾರ ನಿರೀಕ್ಷಕ ಪರಮಾನಂದ ಹೂಗಾರ ಹಾಗೂ ಪಿಎಸ್ಐ ಎಸ್ ವಿ ಗೊಳಸಂಗಿ
ಇಂಡಿ : ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿದ ಮಾಹಿತಿ ಆಧರಿಸಿ ಪೊಲೀಸರು ಹಾಗೂ ಆಹಾರ ನಿರೀಕ್ಷ ಅಧಿಕಾರಿಗಳು ಜಂಟಿ ಅಧಿಕಾರಿಗಳು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಸಾಲೋಟಗಿ-ಹಿರೇರೂಗಿ ರಸ್ತೆಯಲ್ಲಿ ನಡೆದಿದೆ. ಮಾಸೂಮ್ ಅರಬ್, ಸದ್ದಾಂ ಬಾಗವಾನ್ ಬಂಧಿತ ಆರೋಪಿಗಳು. ಇನ್ನು ಅಕ್ರಮವಾಗಿ ಅಕ್ಕಿ ಸಂಗ್ರಹಿಸಿ ಸಾಗಾಟ ಮಾಡಲು ಉದ್ದೇಶ ಹೊಂದಿದ್ದಾರು. ಅದಕ್ಕಾಗಿ ಮಾಹಿತಿ ಆಧರಿಸಿ ದಾಳಿಗೈದು 40,890 ರೂಪಾಯಿ ಮೌಲ್ಯದ ಅಕ್ಕಿಯನ್ನು ಜಪ್ತಿಗೈದಿದ್ದಾರೆ. ಆಹಾರ ನಿರೀಕ್ಷಿಕ ಪರಮಾನಂದ ಹೂಗಾರ ಹಾಗೂ ಗ್ರಾಮೀಣ ಪೋಲಿಸ್ ಠಾಣಾ ಕ್ರೈಮ್ ಪಿ ಎಸ್ ಐ ಎಸ್ ವಿ ಗೊಳಸಂಗಿ ಜಂಟಿಯಾಗಿ ದಾಳಿ ನಡೆಸಿದ್ದಾರೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.