ವಿಕಲಚೇತನರ ಸಭೆ
ವಿಕಲಚೇತನರು ಯಾರಿಗೂ ಕಮ್ಮಿ
ಇಲ್ಲ : ಶಾಸಕ ಪಾಟೀಲ
ಇಂಡಿ : ದೇಹದ ನ್ಯೂನ್ಯತೆಗೆ ಸವಾಲೆಸೆದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರು ನಮ್ಮ ಜೊತೆಗಿದ್ದಾರೆ. ಇಂತಹ ವಿಕಲಚೇತನರು ನಮ್ಮ ಸಮಾಜಕ್ಕೆ ಮಾದರಿ. ಇವರಿಂದ ನಾವು ಕಲಿಯಬೇಕಾಗಿರುವದು ಬಹಳ ಇದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಭಿಪ್ರಾಯಪಟ್ಟರು. ಅವರು ಶನಿವಾರ ಇಂಡಿ ನಗರದ ತಾಲ್ಲೂಕು ಪಂಚಾಯತಿ ಸಭಾ ಭವನದಲ್ಲಿ ವಿಕಲಚೇತನರ ಒಕ್ಕೂಟ ಆಯೋಜಿಸಿದ್ದ ೨೦೨೫-೨೦೨೬ನೇ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿಕಲಚೇತನರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಸಲ್ಲಿಸಿದ ಅಹವಾಲುಗಳನ್ನು ಸ್ವೀಕರಿಸಿ, ಅವುಗಳನ್ನು ಶೀಘ್ರದಲ್ಲಿಯೇ ಈಡೇರಿಸುವದಾಗಿ ಭರವಸೆ ನೀಡಿದರು. ವೇದಿಕೆಯಲ್ಲಿ ತಾಲ್ಲೂಕಿನ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


















