ಸಮಾಜ ಒಂದಾದರೆ ಸಂಘಟನೆಗೆ ಬಲ- ಯಶವಂತರಾಯಗೌಡ
ಇಂಡಿ : ಸಮಾಜ ಸಂಘಟನೆಯಿಂದ ಸಮಾಜದಲ್ಲಿನ ದುರ್ಬಲರಿಗೆ ಸಹಾಯ ಮಾಡುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದಾಗ ಮಾತ್ರ ಸಂಘಟನೆಗೆ ಬೆಲೆ ಬರುತ್ತದೆ.ಬಸವ ತತ್ವ ಪಾಲನೆ ನಮ್ಮೆಲ್ಲರ ಧ್ಯೇಯವಾಗಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಪಟ್ಟಣದ ಶಂಕರ ಪಾರ್ವತಿ ಮಂಗಲ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಕಟಬು, ಕಟಬರ ಅಲೇಮಾರಿ ಒಕ್ಕೂಟದಿಂದ ನಡೆದ ಬೃಹತ್ ಜಿಲ್ಲಾ ಜಾಗೃತಿ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸಮುದಾಯ ಭವನಕ್ಕೆ ಸಮಾಜದ ಬಾಂಧವರ ಜೊತೆಗೆ ಚರ್ಚಿಸಿ ತಾವು ಎಲ್ಲಿ ಹೇಳುತ್ತೀರಿ ಅಲ್ಲಿ ಸಮುದಾಯ ಭವನಕ್ಕೆ ಅನುದಾನ ನೀಡುವದಾಗಿ ಆಶ್ವಾಸನೆ ನೀಡಿ, ದೇವರಾಜು ಅರಸುರವರು ಮತ್ತು ಸಿದ್ದರಾಮಯ್ಯನವರು ಎಲ್ಲ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಿದ್ದಾರೆ. ದೂರ ಸಂಕಲ್ಪ, ದೂರ ಯೋಚನೆಯ ನಿರ್ಧಾರಗಳಿಂದ , ಸಂಸ್ಕೃತಿ, ಸಂಸ್ಕಾರದಿAದ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕಟಬು ಸಮುದಾಯ ಮುಖ್ಯ ವಾಹನಿಗೆ ಬಂದಿದ್ದು ಶ್ಲಾಘಿಸಿದರು.
ಹುನಗುಂದ ಲೀಲಾಮಠದ ಶ್ರೀ ಕಲ್ಲಿನಾಥ ಶ್ರೀಗಳು, ಚಿಣಮಗೇರಿಯ ವೀರಮಹಾಂತ ಶ್ರೀಗಳು ಮಾತನಾಡಿ ಕರ್ನಾಟಕ ರಾಜ್ಯ ಪರಿಶಿಷ್ಠ ಜಾತಿ ಪಟ್ಟಿಯಲ್ಲಿ ಬರುವ ಸಿಳ್ಳೆಕ್ಯಾತ ಜಾತಿಯ ಪರ್ಯಾಯ ಪದಗಳಾಗಿ ಕಿಳ್ಳೆಕ್ಯಾತ, ಕಟಬು,ಕಟಬರ,ಬುಂಡೆಬೇಸ್ತ, ಜಾತಿಗಳ ಕುಲಶಾಸ್ತಿçÃಯ ಅಧ್ಯಯನ ಅತೀ ಶೀಘ್ರ ಅನುಷ್ಠಾನ ಗೊಳ್ಳಬೇಕು ಎಂದರು.
ಇAದಿನ ಸ್ಪರ್ಧಾತ್ಮಕ ಯುಗದಲ್ಲಿ ಉಳ್ಳವರು ಅರ್ಥಿಕವಾಗಿ ದುರ್ಬಲ ಮಕ್ಕಳಿಗೆ ಸಹಾಯ ಮಾಡಿ ಸಾಧನೆಗೆ ಸಹಕಾರಿಯಾಗಬೇಕು.ಅಗರಖೇಡ, ಚಡಚಣ, ಕಡಣ ನಮ್ಮ ಸಮಾಜದ ಜನ ಹೆಚ್ಚಿದ್ದು ಮುಂದೆ ಬರಲು ಪ್ರಯತ್ನಿಸಬೇಕು ಎಂದರು.
ವಿಲಾಸ ಶಿಂಧೆ ಸಮಾಜದ ಕುರಿತು ರಾಜ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಮನವಿ ಸಲ್ಲಿಸಿದರು. ವಿಜಯಪುರ ಜಿಲ್ಲಾ ಕಟಬು ಸಮಾಜದ ಅಧ್ಯಕ್ಷ ಶಿವಮೂರ್ತಿ ಕಾಟಕರ, ವಿಜಯಪುರ ಹಿಂದುಳಿದ ವರ್ಗ ಇಲಾಖೆಯ ಉಪನಿರ್ದೇಶಕ ಈರಪ್ಪ ಆಶಾಪುರೆ ,ಮಹೇಶ ಶಿಂಘೆ, ರಮೇಶ ಕ್ಷತ್ರಿ ಮಾತನಾಡಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಪಾಸಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯ ಮೇಲೆನಾರಾಯಣ ಶಿಂಧೆ, ಮಲ್ಲಿನಾಥ ಕ್ಷತ್ರಿ,ಡಾ. ನಾಗೇಶ ನೆಕನಾರ, ರಾಜ್ಯ ಮಹಿಳಾ ಪ್ರತಿನಿಧಿ ರಾಜೇಶ್ವರಿ ಕ್ಷತ್ರಿ, ಅರುಣ ಕಟ್ಟಿಮನಿ,ರಮೇಶ ಕಟ್ಟಿಮನಿ,ಮಹೇಶ ಶಿಂಧೆ, ಹಣಮಂತ ಕ್ಷತ್ರಿ,ಸ್ವತಂತ್ರ ಶಿಂಧೆ,ಮಧು ಶಿಂಧೆ, ಪಂಡಿತ ಕ್ಷತ್ರಿ ಮತ್ತಿತರಿದ್ದರು.
ಇಂಡಿ ಪಟ್ಟಣದ ಶಂಕರ ಪಾರ್ವತಿ ಮಂಗಲ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಕಟಬು, ಕಟಬರ ಅಲೇಮಾರಿ ಒಕ್ಕೂಟದಿಂದ ನಡೆದ ಬೃಹತ್ ಜಿಲ್ಲಾ ಜಾಗೃತಿ ಸಮಾರಂಭದಲ್ಲಿ ಶಾಸಕ ಯಶವಂತಗೌಡ ಪಾಟೀಲ ಮಾತನಾಡಿದರು.