ಜಿಲ್ಲೆ ವಿಭಜನೆಯಾದಲ್ಲಿ ಸಿಂದಗಿಯನ್ನೆ ಜಿಲ್ಲೆಯನ್ನಾಗಿ ಮಾಡಬೇಕು..!
ಸಿಂದಗಿ: ತಾಲೂಕು ಜಿಲ್ಲೆಯಾಗುವ ಎಲ್ಲ ಅರ್ಹತೆಗಳನ್ನು ಒಳಗೊಂಡಿದೆ. ಒಂದು ವೇಳೆ ಜಿಲ್ಲೆ ವಿಭಜನೆಯಾದಲ್ಲಿ ಸಿಂದಗಿಯನ್ನೆ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಸಿಂದಗಿ ಪಟ್ಟಣ ಅರ್ಬನ್ ಬ್ಯಾಂಕ್ ಆಡಳಿತಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ ರಾಜ್ಯದ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ತಹಶೀಲ್ದಾರ ಮೂಲಕ ಶನಿವಾರ ಮನವಿ ಸಲ್ಲಿಸಿದರು.
ಈ ಸ೦ದರ್ಭದಲ್ಲಿ ಬ್ಯಾಂಕಿನ ನಿರ್ದೇಶಕ ಶರಣಪ್ಪ ವಾರದ ಮಾತನಾಡಿ, ಸಿಂದಗಿ ತಾಲೂಕು 3 ತಾಲೂಕುಗಳಾಗಿ ವಿಭಜನೆಯಾಗಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಹಾಗೂ ವಿಸ್ತೀರ್ಣದಲ್ಲಿ ದೊಡ್ಡದಾಗಿರುವ ಕೇಂದ್ರವಾಗಿದೆ. ಕಂದಾಯ ಇಲಾಖೆಯಲ್ಲಿ ಹೆಚ್ಚಿನ ಆದಾಯ ಸಿಂದಗಿ ತಾಲೂಕಿನಿಂದ ಸಂಗ್ರಹವಾಗುತ್ತದೆ. ರಾಷ್ಟ್ರೀಯ ಹೆದ್ದಾರಿ-50 ಸಿಂದಗಿ ನಗರದಿಂದೊಂದಿಗೆ ಸಂಪರ್ಕ ಬೆಸೆದಿದೆ. ಪೂರ್ವದಲ್ಲಿ ಕಲಬುರಗಿ, ಪಶ್ಚಿಮದಲ್ಲಿ ವಿಜಯಪೂರದಲ್ಲಿ ವಿಮಾನ ನಿಲ್ದಾಣಗಳಿದ್ದು, ರಾಜ್ಯದ ರಾಜಧಾನಿ ಸಂಪರ್ಕಿಸಲು ಅನುಕೂಲವಾಗುತ್ತದೆ. ಈಗಾಗಲೇ ಸಿಂದಗಿಯಲ್ಲಿ 2 ಕ್ರೀಮಿನಲ್ ಮತ್ತು 4 ಸಿವಿಲ್ ಕೋರ್ಟಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಮಿನಿ ವಿಧಾನಸೌಧ ನಿರ್ಮಾಣದ ಹಂತದಲ್ಲಿದೆ. ಉತ್ತಮ ಕೈಗಾರೀಕರಣ ವಲಯವಾಗಿ ಪರಿವರ್ತಿಸಲು ಕೇಂದ್ರ ಸ್ಥಾನದಲ್ಲಿದೆ. ಭೌಗೋಳಿಕ ವಯಲದಲ್ಲಿ ವ್ಯಾಪಕವಾಗಿದ್ದು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಿಂದಗಿ ತಾಲೂಕು ಜಿಲ್ಲೆಯಲ್ಲಿಯೇ ಅಗ್ರವಾಗಿದೆ. ಹೀಗೆ ಎಲ್ಲ ಅನುಕೂಲಗಳು ಇರುವ ಸಿಂದಗಿಯನ್ನು ಜಿಲ್ಲೆ ಮಾಡುವಲ್ಲಿ
ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಈ ವೇಳೆ ಬ್ಯಾಂಕಿನ ಅಧ್ಯಕ್ಷ ಷಣ್ಮುಖಪ್ಪ ಸಂಗಮ, ಉಪಾಧ್ಯಕ್ಷ ಪ್ರಕಾಶ ಕೋರಿ, ನಿರ್ದೇಶಕರಾದ ಸುರೇಶಬಾಬು ಜೋಗೂರ. ಎಮ್.ಸಿ.ಪಟ್ಟಣಶೆಟ್ಟಿ, ರವಿ ನಾಗೂರ. ನೀಲಕಂಠ ಗುಣಾರಿ, ವ್ಯವಸ್ಥಾಪಕ ಮುರಗೇಶ ಬಮ್ಮಣ್ಣಿ, ಬಸವರಾಜ ದೇವೂರ, ಉಮೇಶ ಮರ್ತೂರ, ಶರಣಬಸಪ್ಪ ಅಡಗಲ್ಲ, ಸಲೀಂ ಬಳಗಾನೂರ, ಸುನೀಲ ಘಟೋಳೆ, ಶೈಲಾ ಪಟ್ಟಣಶೆಟ್ಟಿ, ವೀರೇಂದ್ರ ಕುಮಟಗಿ, ಅನುಪಮಾ ಕತ್ತಿ, ಅನೀಲ ನಾಕಮನ, ಶಾಂತೇಶ ಪೂಜಾರಿ, ಕಿರಣ ಮೇಲಿನಮನಿ, ದಾನಪ್ಪ ಬಂದೆ ಸೇ- ರಿದಂತೆ ಬ್ಯಾಂಕಿನ ಸಿಬ್ಬಂದಿ ಇದ್ದರು.