ಆಹಾರ ಜಾಗೃತಿ ವಹಿಸಿದ್ರೆ, ಆರೋಗ್ಯ ಕಾಳಜಿವಹಿಸಿದಂತೆ..!
ಇಂಡಿ: ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ
ಹಾಗೂ ಒತ್ತಡದಿಂದಾಗಿ ಜನರಲ್ಲಿ ಆರೋಗ್ಯ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.
ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತವಾಗಿ ತಪಾಸಣೆಗೆ ಒಳಗಾಗಬೇಕು ಎಂದು ಅಗರಖೇಡದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅನಿಲ ರಾಠೋಡ ಹೇಳಿದರು.
ಗುರುವಾರ ತಾಲೂಕಿನ ಅಗರಖೇಡ ಗ್ರಾಮದಲ್ಲಿ
ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯತ್
ಅಗರಖೇಡ, ತಾಲೂಕ ಆರೋಗ್ಯ ಅಧಿಕಾರಿಗಳ
ಕಾರ್ಯಾಲಯ ಇಂಡಿ ಹಾಗೂ ತಾಲೂಕ ಸಾರ್ವಜನಿಕ ಆಸ್ಪತ್ರೆ ಇಂಡಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸಮುದಾಯ ಆಧಾರಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಕಾಯಿಲೆ ಬಂದ ನಂತರ ಆಸ್ಪತ್ರೆಗೆ ಹೋಗುವುದಕ್ಕಿಂತ
ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು.
ಗ್ರಾಮೀಣ ಭಾಗದ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ
ಮೂಡಿಸಬೇಕು. ಉಚಿತ ಆರೋಗ್ಯ ತಪಾಸಣೆ ಶಿಬಿರಳಿಂದ ಜನರಿಗೆ ಅನುಕೂಲವಾಗುತ್ತದೆ ಎಂದರು.
ತಾಲೂಕ ಸಾರ್ವಜನಿಕ ಆಸ್ಪತ್ರೆಯ ಇಂಡಿಯ ದಂತ
ವೈದ್ಯಾಧಿಕಾರಿ ಡಾ. ರವಿ ಬತಗುಣಕಿ ಮಾತನಾಡಿ, ದುಬಾರಿ ವೆಚ್ಚದ ಔಷಧಗಳನ್ನು ಖರೀದಿಸಲು ಬಡವರಿಗೆ
ಸಾಧ್ಯವಾಗುವುದಿಲ್ಲ. ಇಂತಹ ಶಿಬಿರಗಳ ಪ್ರಯೋಜನ
ಪಡೆಯಬೇಕು ಎಂದ ಅವರು, ದಂತಭಾಗ್ಯ ಹಾಗೂ ಬಾಯಿ ಕ್ಯಾನ್ಸರ್‍ಗೆ ಸಂಬಂಧಪಟ್ಟಂತೆ ಜನರು ಆದಷ್ಟು ಜಾಗೃತಿ ವಹಿಸಬೇಕು. ಸಾರ್ವಜನಿಕರು ದಂತಬಾಗ್ಯದ
ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ಬಿಪಿ. ಶುಗರ್ ಎಚ್‍ಐವಿ, ಟಿವಿ ತಪಾಸಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಿದ್ದಾರೋಡ ಮಠದ ಅಭಿನವ
ಶ್ರದ್ಧಾನಂದ ಸ್ವಾಮೀಜಿಗಳು ಕಾರ್ಯಕ್ರಮವನ್ನು
ಉದ್ಘಾಟಿಸಿ ಆಶೀರ್ವಚನ ನೀಡಿದರು. ಎನ್‍ಟಿಈಪಿ ವಿಭಾಗದ ಬಿ.ಎಸ್. ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ರೇಣುಕಾ ಖಂಡೆಕರ,
ಚಂದ್ರಕಾಂತ್ ಬಡಿಗೇರ್, ಎಸ್.ಆರ್. ಗೋಟ್ಯಾಳ ಎಸ್.ಎಸ್. ಅಂಕಲಗಿ, ಪ್ರಮೋದ್ ಕುಮಾರ, ಎಸ್.ಬಿ. ಜಾದವ, ಎಸ್.ಎಸ್. ಕಲ್ಮನಿ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.
ಇಂಡಿ: ತಾಲೂಕಿನ ಅಗರಖೇಡ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯತ್
ಅಗರಖೇಡ, ತಾಲೂಕ ಆರೋಗ್ಯ ಅಧಿಕಾರಿಗಳ
ಕಾರ್ಯಾಲಯ ಇಂಡಿ ಹಾಗೂ ತಾಲೂಕ ಸಾರ್ವಜನಿಕ ಆಸ್ಪತ್ರೆ ಇಂಡಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸಮುದಾಯ ಆಧಾರಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅನೀಲ ರಾಠೋಡ ಮಾತನಾಡಿದರು.