ಮಕ್ಕಳ ಪ್ರತಿಬೆ ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿ:
ಟಿ ಎಸ್ ಆಲಗೂರ
ಇಂಡಿ: ಎಲ್ಲ ಮಕ್ಕಳಲ್ಲೂ ವಿಶೇಷವಾದ ಪ್ರತಿಭೆ ಅಡಗಿದ್ದು, ಅದನ್ನು ಪ್ರೋತ್ಸಾಹಿಸಿ ಬೆಳೆಸುವ ಕೆಲಸವನ್ನು ಪಾಲಕರು ಹಾಗೂ ಶಿಕ್ಷಕರು ಒಂದಾಗಿ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ ಹೇಳಿದರು.
ಅವರು ತಾಲೂಕಿನ ತೆನ್ನಿಹಳ್ಳಿ ಗ್ರಾಮದ ಸರಕಾರಿ ಉರ್ದು ಪ್ರೌಢಶಾಲಾ ಆವರಣದಲ್ಲಿ ಬುಧವಾರ ನಡೆದ ಹಿರೇರೂಗಿ ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿನ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಪ್ರತಿಭಾ ಕಾರಂಜಿಯಂಥ ಸ್ಪರ್ಧೆಗಳು ಅವಶ್ಯ. ಮಕ್ಕಳ ಪ್ರತಿಬೆ ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಕಲೆಗಳನ್ನು ಉತ್ತೇಜಿಸುವ ಮೂಲಕ ಶಾಲಾ ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆ- ಸೃಜನಾತ್ಮಕ ಕೌಶಲ ಹೊರತರಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದರು.
ಮೌಲಾನಾ ಜಿಯಾ ಉಲ್ ಹಕ್ ಉಮರಿ ಸಾನಿಧ್ಯ ವಹಿಸಿ ಮಾತನಾಡಿ, ಪ್ರತಿಭಾ ಕಾರಂಜಿಯು ಶಿಕ್ಷಣ ಕ್ಷೇತ್ರದಲ್ಲಿ ಹೆಮ್ಮೆ ಮೂಡಿಸುವ ಕಾರ್ಯಕ್ರಮವಾಗಿದ್ದು, ಇದು ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಸ್ ಎಂ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಮೌಲಾನಾ ಮಹ್ಮದ್ ಮಂಜೂರ ಆಲಂ ಖಾನ್, ಎ ಸಿ ಹುಣಸಗಿ, ಎ ಜಿ ಚೌಧರಿ, ಎಸ್ ವ್ಹಿ ಹರಳಯ್ಯ, ಪಿ ಎಸ್ ಚಾಂದಕವಟೆ, ವೈ ಟಿ ಪಾಟೀಲ, ಎಂ ಎಂ ವಾಲೀಕಾರ, ತಿಪ್ಪಣ್ಣ ಜಂಬಗಿ, ಎ ಎಂ ವಾಲೀಕಾರ, ಬಶೀರ್ ಅಹ್ಮದ್ ಇನಾಮದಾರ, ಚಾಂದಪಾಷಾ ಜಮಾದಾರ, ಮಹಿಬೂಬ ಖಾದ್ರಿ ಜುನೈದಿ,ಪೀರಾ ಜಹಗೀರದಾರ,ಉರ್ದು ಸಿಆರ್ಪಿಗಳಾದ ಬಿಡಿ ಛಪ್ಪರಬಂದ ಪರ್ವೇಜ್ ಪಟೇಲ, ಆಯ್ ಎ ಸಿಕ್ಕಲಗಾರ, ಬಿ ಸಿ ಕುಮಸಗಿ, ಹಸನ್ ಮುಜಾವರ, ಲಾಲಸಾ ಜುನೈದಿ, ಆರ್ ಎಸ್ ಚಡಚಣಕರ, ಜಿ ಎಂ ಕುಮಸಗಿ,ಶಾಹಿನ್ ಅಂಜುಮ್,ಎಂ ಎ ಮುಲ್ಲಾ ಸೇರಿದಂತೆ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.
ಶಿಕ್ಷಕ ಎಸ್ ಎಂ ಮಕಾನದಾರ ಸ್ವಾಗತಿಸಿದರು.ಶಿಕ್ಷಕ ಸಂತೋಷ ಬಂಡೆ ನಿರೂಪಿಸಿದರು. ಸಿಆರ್ಪಿ ಬಿ ಡಿ ಚಪ್ಪರಬಂದ ವಂದಿಸಿದರು.