ಲಿಂಗಸೂಗೂರು: ಈಚನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿ ಪರಿಶೀಲನೆಗೆ ಬೇಟಿ ನೀಡಿದ ಇಂಜಿನೀಯರ್ ಸೈಯದ್ ಶಫಿ ಉಲ್ಲಾಖಾನ್ ಅವರು ಮಹಿಳಾ ಕಾರ್ಮಿಕರಿಗೆ ನಿಂದನೆ ಮಾಡಿದ ವಿಷಯವಾಗಿ ಇಂದು ಈಚನಾಳ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಇಓ ಅವರಿಗೆ ನರೇಗಾ ಕೂಲಿ ಕಾರ್ಮಿಕರು ಇಂಜಿನೀಯರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ 24-01-2022 ರಂದು ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕುಪ್ಪಣ ಚಿಗರಿ, ಆನಂದ ಕುಂಬಾರ್, ಸಣ್ಣ ಗದ್ದೆಪ್ಪ, ಸಹದೇವಪ್ಪ, ಮಲ್ಲರೆಡ್ಡಿ, ದೆವಮ್ಮ,ರುದ್ರಮ್ಮ,ಗೌರಮ್ಮ, ಶಶಿಕಲಾ, ಅಕ್ಕಮ್ಮ, ಉಮಾದೇವಿ ಉಪಸ್ಥಿತರಿದ್ದರು.


















