ಐಸಿಸಿ ವಿಶ್ವಕಪ್ 2023: ಹರಿಣಗಳ ಸವಾಲು ಮೆಟ್ಟಿನಿಲ್ಲಲ್ಲು ಸಿಂಹಳಿಯರ ಪಡೆ..? ಅರುಣ ಜೇಟ್ಲಿ ಕ್ರಿಕೇಟ್ ಮೈಧಾನ ಸಜ್ಜು..?
VOICE OF JANATA DESK NEWS : ಐಸಿಸಿ ವಿಶ್ವಕಪ್ 2023 ಏಕದಿನ ಟೂರ್ನಿಯ 4ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಉಭಯ ತಂಡಗಳ ಕಾದಾಟಕ್ಕೆ ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂ ವೇದಿಕೆ ಕಲ್ಪಿಸುತ್ತಿದೆ.
ಶ್ರೀಲಂಕಾದ ದಸುನ್ ಶನಕಾ ಮತ್ತು ದಕ್ಷಿಣ ಆಫ್ರಿಕಾದ ತೆಂಬಾ ಬವುಮಾ ಅವರಿಗೆ ಈ ಬಾರಿಯ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯು ವಿಶೇಷವಾಗಿದೆ.
ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ತಮ್ಮ ತಂಡಗಳನ್ನು ಮುನ್ನಡೆಸುವ ಹೊಣೆ ನಿಭಾಯಿಸುತ್ತಿದ್ದಾರೆ. ಶನಿವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಶನಕಾ ನಾಯಕತ್ವದ ಶ್ರೀಲಂಕಾ ಮತ್ತು ಬವುಮಾ ಮುನ್ನಡೆಸುತ್ತಿರುವ ದಕ್ಷಿಣ ಆಫ್ರಿಕಾ ಸೆಣಸಲಿವೆ.
ಮೊದಲಿನಿಂದಲೂ ಉತ್ತಮ ಆಟಗಾರರು ಇರುವ ದಕ್ಷಿಣ ಆಫ್ರಿಕಾ ತಂಡವು ಇದುವರೆಗೆ ಒಂದು ಬಾರಿಯೂ ಏಕದಿನ ವಿಶ್ವಕಪ್ ಗೆದ್ದಿಲ್ಲ. ನಿರ್ಣಾಯಕ ಹಂತದಲ್ಲಿ ಸೋಲುವ ‘ಚೋಕರ್‘ ಪಟ್ಟವೂ ಈ ತಂಡಕ್ಕಿದೆ. ಈ ತಂಡವು ಪ್ರಶಸ್ತಿ ಸನಿಹ ಬಂದು ಎಡವಿದ್ದೇ ಹೆಚ್ಚು.
ಈ ಹಣೆಪಟ್ಟಿಯನ್ನು ಕಿತ್ತುಹಾಕುವ ಅವಕಾಶ ತೆಂಬಾ ಬಳಗದ ಮುಂದೆ ಇದೆ. ಅನುಭವಿ ಬ್ಯಾಟರ್ ಕ್ವಿಂಟನ್ ಡಿ ಕಾಕ್, ರೀಜಾ ಹೆನ್ರಿಕ್ಸ್, ಏಡನ್ ಮರ್ಕರಂ, ಡೇವಿಡ್ ಮಿಲ್ಲರ್, ವೇಗಿಗಳಾದ ಲುಂಗಿ ಗಿಡಿ, ಕಗಿಸೊ ರಬಾಡ ಮತ್ತು ತಬ್ರೇಜ್ ಶಮ್ಸಿ ಅವರು ತಂಡದ ಶಕ್ತಿಯಾಗಿದ್ದಾರೆ.
ಆದರೆ ಇಂದು ಮಧ್ಯಾಹ್ನ 2 ಗಂಟೆಗೆ ದ.ಆಫ್ರಿಕಾ–ಶ್ರೀಲಂಕಾ ಪಂದ್ಯ ಮದ್ಯ ನಡೆಯುವ ಪಂದ್ಯ ಬಹಳ ರೋಚಕ ಮತ್ತು ಅತ್ಯಾಕರ್ಷಕ ವಾಗಿಕಾಣುವ ತವಕ ಇದೆ ಎಂದು ಕಾಮೆಟೆಟರ್ಸ್ ಮಾತಾಡುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ಸಂಭಾವ್ಯ ಆಡುವ ಬಳಗ
ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಾಸ್ಸಿ ಡಸ್ಸೆನ್, ಏಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೋಟ್ಜಿ, ಆಂಡಿಲ್ ಫೆಲುಕ್ವಾಯೊ/ತಬ್ರೈಜ್ ಶಮ್ಸಿ, ಕೇಶವ್ ಮಹಾರಾಜ್, ಕಗಿಸೊ ರಬಾಡ
ಶ್ರೀಲಂಕಾ ಸಂಭಾವ್ಯ ಆಡುವ ಬಳಗ
ಕುಸಲ್ ಪೆರೆರಾ, ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ದುಶನ್ ಹೇಮಂತ, ದಿಲ್ಶನ್ ಮಧುಶಂಕ, ಲಹಿರು ಕುಮಾರ.