ದಕ್ಷಿಣ ಆಫ್ರಿಕಾ Vs ಬಾಂಗ್ಲಾದೇಶ ಕದನ
Voice of Janata : Sports News :
ICC T20 WORLD CUP 2024:
ನ್ಯೂಯಾರ್ಕ್ : ಸೋಮವಾರ ನಾಸೌ ಕೌಂಟಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶದ ಎದುರು ಕಣಕ್ಕಿಳಿಯಲಿದೆ.
ದಕ್ಷಿಣ ಆಫ್ರಿಕಾ ತಂಡವು ತನ್ನ ಕಳೆದೆರಡೂ ಪಂದ್ಯಗಳಲ್ಲಿ ಜಯಿಸಿದೆ. ಆದರೂ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡದ ಕೊರಗಿನಲ್ಲಿದೆ. ಕ್ವಿಂಟನ್ ಡಿಕಾಕ್, ಹೆನ್ರಿಚ್ ಕ್ಲಾಸೆನ್, ಮರ್ಕರಂ ಸೇರಿದಂತೆ ಅಬ್ಬರದ ಬ್ಯಾಟಿಂಗ್ ಆಡಿಲ್ಲ. ಡೇವಿಡ್ ಮಿಲ್ಲರ್ ಮತ್ತು ಟ್ರಿಸ್ಟನ್ ಸ್ಟಬ್ಸ್ ಅವರು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಚೆಂದದ ಬ್ಯಾಟಿಂಗ್ ಮೂಲಕ ಗೆಲುವಿಗೆ ಕಾರಣರಾಗಿದ್ದರು.
ನಜ್ಮುಲ್ ಹುಸೇನ್ ಶಾಂತೋ ನಾಯಕತ್ವದ ಬಾಂಗ್ಲಾದೇಶವು ಇದುವರೆಗೆ ಆಡಿರುವ ಒಂದು ಪಂದ್ಯದಲ್ಲಿ ಶ್ರೀಲಂಕಾ ಎದುರು ಜಯಿಸಿದೆ. ಇದರಿಂದಾಗಿ ಅಪಾರ ಆತ್ಮವಿಶ್ವಾಸದಲ್ಲಿದೆ. ದಕ್ಷಿಣ ಆಫ್ರಿಕಾ ತಂಡಕ್ಕೆ ದಿಟ್ಟ ಸವಾಲು ಎಸೆಯಲು ಸಿದ್ಧವಾಗಿದೆ.
ಬ್ಯಾಟರ್ ಲಿಟನ್ ದಾಸ್, ತೌಹಿದ್ ಹೃದಯ್, ಬೌಲರ್ ಮುಸ್ತಫಿಜುರ್ ರೆಹಮಾನ್ ಹಾಗೂ ರಶೀದ್ ಹುಸೇನ್ ಅವರು ಉತ್ತಮ ಲಯದಲ್ಲಿದ್ದಾರೆ. ಅವರ ಮೇಲೆ ತಂಡದ ನಿರೀಕ್ಷೆಯ ಭಾರವಿದೆ.
ಪಂದ್ಯ ಪ್ರಾರಂಭ : 8PM Today
ದಕ್ಷಿಣ ಆಫ್ರಿಕಾ Vs ಬಾಂಗ್ಲಾದೇಶ ICC T20 ವಿಶ್ವಕಪ್ ತಂಡಗಳು
ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಾಮ್ (ಸಿ), ಒಟ್ನಿಯೆಲ್ ಬಾರ್ಟ್‌ಮ್ಯಾನ್, ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್, ಜಾರ್ನ್ ಫೋರ್ಚುಯಿನ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಆನ್ರಿಚ್ ನಾರ್ಟ್ಜೆ, ಕಗಿಸೊ ರಬಾಡಾ, ಟ್ರೈಸ್ಟಾನ್ ರಿಕೆಲ್ಟನ್, ಟ್ರೀಸ್ಟಾನ್ ರಿಕೆಲ್ಟನ್ ಸ್ಟಬ್ಸ್.
ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂಟೊ (ಸಿ), ತಸ್ಕಿನ್ ಅಹ್ಮದ್, ಲಿಟ್ಟನ್ ದಾಸ್, ಸೌಮ್ಯ ಸರ್ಕಾರ್, ತಂಝಿದ್ ಹಸನ್ ತಮೀಮ್, ಶಕೀಬ್ ಅಲ್ ಹಸನ್, ತೌಹಿದ್ ಹೃದಯ್, ಮಹ್ಮದ್ ಉಲ್ಲಾ ರಿಯಾದ್, ಜೇಕರ್ ಅಲಿ ಅನಿಕ್, ತನ್ವಿರ್ ಇಸ್ಲಾಂ, ಶಾಕ್ ಮಹೇದಿ ಹಸನ್, ರಿಶಾದ್ ಹೊಸ್ಸೈನ್, ರಿಶಾದ್ ಹೊಸೈಝಿನ್ ಶೋರಿಫುಲ್ ಇಸ್ಲಾಂ, ತಂಝಿಮ್ ಹಸನ್ ಸಾಕಿಬ್.