ICC T20 Women WORLD CUP : ನ್ಯೂಜಿಲೆಂಡ್ ವಿರುದ್ಧ ಅಭಿಯಾನ ಪ್ರಾರಂಭಿಸಿದ ಭಾರತ
ದುಬೈ: ನ್ಯೂಝಿಲ್ಯಾಂಡ್ ವಿರುದ್ಧ ಎ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ನಿರ್ಣಾಯಕ ಪಂದ್ಯವನ್ನಾಡುವ ಮೂಲಕ ಭಾರತೀಯ ಮಹಿಳೆಯರ ಕ್ರಿಕೆಟ್ ತಂಡವು ಮಹಿಳೆಯರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರ ತನ್ನ ಅಭಿಯಾನವನ್ನು ಆರಂಭಿಸಲಿದೆ.
ದುಬೈ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಪಂದ್ಯಾವಳಿಯಲ್ಲಿ ಎರಡೂ ತಂಡಗಳಿಗೆ ಇದು ಮೊದಲ ಪಂದ್ಯವಾಗಿದ್ದು ಮೆಗಾ ಟೂರ್ನಮೆಂಟ್‌ನಲ್ಲಿ ಸಕಾರಾತ್ಮಕ ಆರಂಭದ ನಿರೀಕ್ಷೆಯಲ್ಲಿವೆ.
ಪಂದ್ಯಾವಳಿಯಲ್ಲಿ 10 ತಂಡಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗಿದ್ದು, ಪ್ರತಿ ತಂಡವು 4 ಪಂದ್ಯಗಳನ್ನು ಆಡಲಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಅ.17 ಹಾಗೂ 18ರಂದು ನಿಗದಿಯಾಗಿರುವ ಸೆಮಿ ಫೈನಲ್ ಸುತ್ತಿಗೆ ಲಗ್ಗೆ ಇಡಲಿವೆ. ಫೈನಲ್ ಪಂದ್ಯವು ದುಬೈನಲ್ಲಿ ಅ.20ರಂದು ನಡೆಯಲಿದೆ.
ಭಾರತ ತಂಡವು ಎ ಗುಂಪಿನಲ್ಲಿದ್ದು, ಆಸ್ಟ್ರೇಲಿಯ, ಶ್ರೀಲಂಕಾ, ನ್ಯೂಝಿಲ್ಯಾಂಡ್ ಹಾಗೂ ಪಾಕಿಸ್ತಾನ ತಂಡಗಳಿಂದ ಸವಾಲು ಎದುರಿಸಲಿದೆ. ಭಾರತ ತಂಡವು ನ್ಯೂಝಿಲ್ಯಾಂಡ್ ವಿರುದ್ಧ ಶುಕ್ರವಾರ ಮೊದಲ ಪಂದ್ಯವನ್ನು ಆಡಿದ ನಂತರ ಪಾಕಿಸ್ತಾನ(ಅ.6) ಹಾಗೂ ಶ್ರೀಲಂಕಾ(ಅ.9) ತಂಡಗಳ ವಿರುದ್ಧ ದುಬೈನಲ್ಲಿ ಆಡಲಿದೆ. ಬಹುನಿರೀಕ್ಷಿತ ಆಸ್ಟ್ರೇಲಿಯದ ವಿರುದ್ಧ ಪಂದ್ಯವನ್ನು ಅ.13ರಂದು ಶಾರ್ಜಾದಲ್ಲಿ ಆಡಲಿದೆ.
ಪಂದ್ಯ ಆರಂಭದ ಸಮಯ: ರಾತ್ರಿ 7:30