ICC ODI World Cup 2023 : Shrilanka Vs Bangladesh
ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂದು ದೆಹಲಿಯಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 279 ರನ್‌ಗಳಿಗೆ ಸರ್ವಪತನ ಕಂಡಿತು. ಬಾಂಗ್ಲಾದೇಶ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. 49.3 ಓವರ್‌ಗಳಲ್ಲಿ ಶ್ರೀಲಂಕಾ 279 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡವು 41.1 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 282 ರನ್ ಗಳಿಸಿತು. ಶಾಂತೊ ಮತ್ತು ಶಕೀಬ್ ಅವರ ಬೀಸಾಟದಿಂದಾಗಿ ತಂಡವು ಗೆಲುವಿನತ್ತ ವಾಲಿತು. ಆದರೆ ಸುಲಭವಾಗಿ ಗೆಲ್ಲುವ ಅವಕಾಶವಿದ್ದರೂ ದೊಡ್ಡ ಹೊಡೆತಗಳಿಗೆ ಯತ್ನಿಸಿದ ಬಾಂಗ್ಲಾ ಬ್ಯಾಟರ್‌ಗಳು ವಿಕೆಟ್ ಕಳೆದುಕೊಂಡರು. ಶಾಂತೋ ಮತ್ತು ಶಕೀಬ್ ಕೂಡ ಇದೇ ಕಾರಣದಿಂದ ಶತಕ ಗಳಿಕೆ ತಪ್ಪಿಸಿಕೊಂಡರು.
ಶ್ರೀಲಂಕಾದ ಬೌಲರ್ ದಿಲ್ಶಾನ್ ಮಧುಶಂಕಾ ಮತ್ತು ಮಹೀಷ ತೀಕ್ಷಣ ಅವರು ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಗಳಿಸಿದರು. ಮ್ಯಾಥ್ಯೂಸ್ ಕೂಡ ಎರಡು ವಿಕೆಟ್ ಹಾಕಿದರು. ಕೊನೆಯ ಹಂತದಲ್ಲಿ ಬೌಲರ್‌ಗಳ ಪ್ರಯತ್ನ ಮಾಡಿದರಾದರೂ ಲಂಕಾ ತಂಡಕ್ಕೆ ಜಯ ಸಿಗಲಿಲ್ಲ.
ಸಂಕ್ಷಿಪ್ತ ಸ್ಕೋರು:
ಶ್ರೀಲಂಕಾ: 49.3 ಓವರ್‌ಗಳಲ್ಲಿ 279 (ಪಥುಮ್ ನಿಸಾಂಕ 41, ಸದಿರ ಸಮರವಿಕ್ರಮ 41, ಚರಿತ ಅಸಲಂಕಾ 108, ಧನಂಜಯ್ ಡಿಸಿಲ್ವಾ 34, ಮಹೀಷ ತೀಕ್ಷಣ 22, ಶೊರಿಫುಲ್ ಇಸ್ಲಾಮ್ 52ಕ್ಕೆ2, ತಂಜೀಮ್ ಹಸನ್ ಸಕೀಬ್ 80ಕ್ಕೆ3, ಶಕೀಬ್ ಅಲ್ ಹಸನ್ 57ಕ್ಕೆ2)
ಬಾಂಗ್ಲಾದೇಶ: 41.1 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 282 (ಲಿಟನ್ ದಾಸ್ 23, ನಜ್ಮುಲ್ ಹುಸೇನ್ ಶಾಂತೊ 90, ಶಕೀಬ್ ಅಲ್ ಹಸನ್ 82, ಮಹಮುದುಲ್ಲಾ 22, ದಿಲ್ಶಾನ್ ಮಧುಶಂಕಾ 69ಕ್ಕೆ3, ಮಹೀಷ ತೀಕ್ಷಣ 44ಕ್ಕೆ2, ಏಂಜೆಲೊ ಮ್ಯಾಥ್ಯೂಸ್ 39ಕ್ಕೆ2) ಫಲಿತಾಂಶ: ಬಾಂಗ್ಲಾದೇಶ ತಂಡಕ್ಕೆ 3 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಶಕೀಬ್ ಅಲ್ ಹಸನ್