ಐಸಿಸಿ ವಿಶ್ವಕಪ್ 2023; ಗೆಲುವಿನ ಖಾತೆ ತೆರದ ಆಂಗ್ಲರು..
ICC ODI World Cup 2023: ಆಂಗ್ಲರ ವಿರುದ್ಧ ಮುಗ್ಗರಿಸಿದ ಬಾಂಗ್ಲಾ..!
Voice Of Janata News Desk : ICC ODI World Cup 2023: ವಿಶ್ವಕಪ್-2023 ರ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತನ್ನ ಎರಡನೇ ಪಂದ್ಯದಲ್ಲಿ ಗೆಲುವಿನ ಖಾತೆಯನ್ನು ತೆರೆದಿದೆ. ಮಂಗಳವಾರ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬಾಂಗ್ಲಾದೇಶವನ್ನು 137 ರನ್ಗಳಿಂದ ಸೋಲಿಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಐದು ವಿಕೆಟ್ ಕಳೆದುಕೊಂಡು 364 ರನ್ ಕಲೆಹಾಕಿತು. ಈಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡ 48.2 ಓವರ್ಗಳಲ್ಲಿ 227 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ಮೊದಲ ಸೋಲಾಯಿತು.
ಎರಡು ತಂಡದ ಸ್ಕೋರ್ ವಿವರ
ಇಂಗ್ಲೆಂಡ್: 50 ಓವರ್ಗಳಿಗೆ 364-9 (ಡಾವಿಡ್ ಮಲಾನ್ 140, ಜೋ ರೂಡ್ 82, ಜಾನಿ ಬೈರ್ಸ್ಟೋವ್ 52; ಮೆಹಿಡಿ ಹಸನ್ 71ಕ್ಕೆ 4, ಶೋರಿಫುಲ್ ಇಸ್ಲಾಮ್ 75ಕ್ಕೆ 3)
ಬಾಂಗ್ಲಾದೇಶ: 48.2 ಓವರ್ಗಳಿಗೆ 227-10 (ಲಿಟಾನ್ ದಾಸ್ 76, ಮುಷ್ಫಿಕರ್ ರಹೀಮ್ 51, ತೌಹಿದ್ ಹೃಡಾಯ್ 39; ರೀಸ್ ಟಾಪ್ಲಿ 43ಕ್ಕೆ 2, ಕ್ರಿಸ್ ವೋಕ್ಸ್ 49ಕ್ಕೆ 2)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಡಾವಿಡ್ ಮಲಾನ್