Voice Of Janata News Desk
ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾದ ಕ್ರಿಕೆಟ್ ವಿಶ್ವಕಪ್ 2023: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆಯುತ್ತಿರುವ 2023 ರ ವಿಶ್ವಕಪ್‌ನ ODI 41 ರಲ್ಲಿ ಶ್ರೀಲಂಕಾ ವಿರುದ್ಧ ಐದು ವಿಕೆಟ್‌ಗಳ ವಿಶ್ವಾಸದೊಂದಿಗೆ ನ್ಯೂಜಿಲೆಂಡ್ ನಾಲ್ಕನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. 172 ರನ್ ಬೆನ್ನಟ್ಟಿದ ನ್ಯೂಜಿಲೆಂಡ್ 172/5 ತಲುಪಿತು
ನ್ಯೂಜಿಲೆಂಡ್ ತಂಡ ಐಸಿಸಿ ವಿಶ್ವಕಪ್ ಟೂರ್ನಿಯ ತನ್ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 5 ವಿಕೆಟ್‌ಗಳ ಅಂತರದಲ್ಲಿ ಜಯಗಳಿಸಿತು. ಈ ಗೆಲುವಿನೊಂದಿಗೆ ಕಿವೀಸ್ ಪಡೆ ತನ್ನ ಸೆಮಿ ಹಾದಿಯನ್ನು ಉತ್ತಮ ರನ್‌ರೇಟ್‌ನೊಂದಿಗೆ ಭದ್ರಪಡಿಸಿಕೊಂಡಿದೆ
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ಅಂತ್ಯಗೊಂಡರೂ ಉಳಿದಿರುವ ಒಂದು ಸ್ಥಾನ ಇನ್ನೂ ಖಚಿತವಾಗಿಲ್ಲ. ಶ್ರೀಲಂಕಾ ವಿರುದ್ದದ ರೋಚಕ ಪಂದ್ಯದಲ್ಲಿ ನ್ಯೂಜಿಲೆಂಡ್ 5 ವಿಕೆಟ್ ಗೆಲುವು ದಾಖಲಿಸಿದೆ. ವಿಶೇಷ ಅಂದರೆ ಶ್ರೀಲಂಕಾ ನೀಡಿದ 171 ರನ್ ಟಾರ್ಗೆಟನ್ನು ನ್ಯೂಜಿಲೆಂಡ್ 23.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ. ಈ ನ್ಯೂಜಿಲೆಂಡ್ ಸೆಮಿಫೈನಲ್ ಸ್ಥಾನ ಬಹುತೇಕ ಖಚಿತಗೊಂಡಿದೆ. ಇತ್ತ ಪಾಕಿಸ್ತಾನದ ಸೆಮೀಸ್ ಹಾದಿ ಬಹುತೇಕ ಕಮರಿದೆ.
ಸಂಕ್ಷಿಪ್ತ ಸ್ಕೋರ್:
ಶ್ರೀಲಂಕಾ 46.4 ಓವರ್‌ಗಳಲ್ಲಿ 171 (ಕುಸಾಲ್ ಪೆರೀರಾ 51, ಏಂಜೆಲೊ ಮ್ಯಾಥ್ಯೂಸ್ 16, ಧನಂಜಯ ಡಿಸಿಲ್ವಾ 19, ಮಹೀಶ ತೀಕ್ಷಣ ಔಟಾಗದೆ 38, ದಿಲ್ಶಾನ್ ಮದುಶಂಕ 19, ಟ್ರೆಂಟ್ ಬೌಲ್ಟ್ 37ಕ್ಕೆ 3, ಲಾಕಿ ಫರ್ಗ್ಯುಸನ್ 35ಕ್ಕೆ 2, ಮಿಚೆಲ್ ಸ್ಯಾಂಟ್ನರ್ 22ಕ್ಕೆ 2, ರಚಿನ್ ರವೀಂದ್ರ 21ಕ್ಕೆ 2);
ನ್ಯೂಜಿಲೆಂಡ್ 23.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 172 (ಡೆವೊನ್ ಕಾನ್ವೆ 45, ರಚಿನ್ ರವೀಂದ್ರ 42, ಕೇನ್ ವಿಲಿಯಮ್ಸನ್ 14, ಡೆರಿಲ್ ಮಿಚೆಲ್ 43, ಮಾರ್ಕ್ ಚಾಪ್‌ಮನ್ 7, ಗ್ಲೆನ್ ಫಿಲಿಪ್ಸ್ ಔಟಾಗದೆ 17, ಏಂಜೆಲೊ ಮ್ಯಾಥ್ಯೂಸ್ 29ಕ್ಕೆ 2)
ಫಲಿತಾಂಶ: ನ್ಯೂಜಿಲೆಂಡ್‌ಗೆ 5 ವಿಕೆಟ್ ಗೆಲುವು
ಪಂದ್ಯಶ್ರೇಷ್ಠ: ಟ್ರೆಂಟ್ ಬೌಲ್ಟ್