ICC ODI Men’s WORLD CUP 2023: AUS Vs AFG,Match own BY AuS
Voice Of Janata DesK News : ಐಸಿಸಿ ವಿಶ್ವಕಪ್ ೨೦೨೩ : ಏಕದಿನ ಕ್ರಿಕೆಟ್ ವಿಶ್ವಕಪ್ನ ಇತಿಹಾಸದಲ್ಲಿ ಸ್ಮರಣೀಯ ಇನಿಂಗ್ಸ್ವೊಂದಕ್ಕೆ ವಾಂಖೆಡೆ ಕ್ರೀಡಾಂಗಣ ಮಂಗಳವಾರ ಸಾಕ್ಷಿಯಾಯಿತು. ನೋವು ಲೆಕ್ಕಿಸದೆ ಏಕಾಂಗಿ ಹೋರಾಟದ ಮೂಲಕ ಅಜೇಯ ದ್ವಿಶತಕ ಗಳಿಸಿದ ಗ್ಲೆನ್ ಮ್ಯಾಕ್ಸ್ವೆಲ್ ಅವರು ಆಸ್ಟ್ರೇಲಿಯಾ ತಂಡವನ್ನು ಸೆಮಿಫೈನಲ್ಗೆ ಮುನ್ನಡೆಸಿದರು.
ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ 39ನೇ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಅವರ ಅಬ್ಬರದ ದ್ವಿಶತಕದ ನೆರವಿಂದ ಆಸ್ಟ್ರೇಲಿಯಾ, ಅಪ್ಘಾನಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ವಿಶ್ವಕಪ್ ಪೈನಲ್ ಪ್ರವೇಶಿಸಿದೆ.
ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ನಿಗದಿತ 50 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತು.
ಗೆಲುವಿಗೆ 292 ರನ್ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ 91ಕ್ಕೆ 7 ವಿಕೆಟ್ ಕಳೆದುಕೊಂಡು, ಹೀನಾಯ ಸೋಲಿನತ್ತಾ ಸಾಗುತ್ತಿತ್ತು. ಆದರೆ ಗ್ಲೇನ್ ಮ್ಯಾಕ್ಸ್ವೆಲ್ ಏಕಾಂಗಿಯಾಗಿ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಇವರಿಗೆ ನಾಯಕ ಪ್ಯಾಟ್ ಕಮಿನ್ಸ್ ಉತ್ತಮ ಸಾಥ್ ನೀಡಿದರು.
ಸ್ಕೋರ್ ವಿವರ
ಅಫಘಾನಿಸ್ತಾನ: 50 ಓವರ್ಗಳಿಗೆ 291-5 (ಇಬ್ರಾಹಿಮ್ ಝದ್ರಾನ್ 126*, ರಶೀದ್ ಖಾನ್ 35, ಹಷ್ಮತ್ಉಲ್ಲಾ ಶಾಹಿದಿ 26; ಜಾಶ್ ಹೇಝಲ್ವುಡ್ 39 ಕ್ಕೆ 2)
ಆಸ್ಟ್ರೇಲಿಯಾ: 46.5 ಓವರ್ಗಳಿಗೆ 293-7 (ಗ್ಲೆನ್ ಮ್ಯಾಕ್ಸ್ವೆಲ್ 201*; ನವೀನ್ ಉಲ್ ಹಕ್ 47ಕ್ಕೆ 2, ಅಝಮತ್ಉಲ್ಲಾ 52ಕ್ಕೆ 2, ರಶೀದ್ ಖಾನ್ 44ಕ್ಕೆ 2
ಪಂದ್ಯ ಶ್ರೇಷ್ಠ ಪ್ರಶಸ್ತಿ: ಗ್ಲೆನ್ ಮ್ಯಾಕ್ಸ್ವೆಲ್