Voice Of Janata DesK News : ICC ODI Men’s WORLD Cricket CUP 2023: AUS Vs BANGLADESH
ಪುಣೆ: ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ನವೆಂಬರ್ 16ರಂದು ಕೋಲ್ಕತ್ತದಲ್ಲಿ ನಡೆಯುವ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಹೌದು ಆಸ್ಟ್ರೇಲಿಯಾ ತಂಡ ಶನಿವಾರ ನಡೆದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಎಂಟು ವಿಕೆಟ್‌ಗಳಿಂದ ಬಾಂಗ್ಲಾದೇಶ ತಂಡವನ್ನು ಬಗ್ಗುಬಡಿಯಿತು. ಆಸ್ಟ್ರೇಲಿಯಾ ಆ ಮೂಲಕ ಸೆಮಿಫೈನಲ್‌ಗೆ ಸೂಕ್ತ ರೀತಿಯಲ್ಲೇ ಸಜ್ಜಾಯಿತು.
ಗೆಲುವಿಗೆ 307 ರನ್‌ಗಳ ಗುರಿಯನ್ನು ಎದುರಿಸಿದ್ದ ಆಸ್ಟ್ರೇಲಿಯಾ ಇನ್ನೂ 32 ಎಸೆತಗಳು ಇರುವಂತೆ ಎರಡು ವಿಕೆಟ್ ನಷ್ಟದಲ್ಲಿ ಅದನ್ನು ಸಾಧಿಸಿತು. ಮಾರ್ಷ್ ಕೇವಲ 132 ಎಸೆತಗಳ ಇನಿಂಗ್ಸ್‌ನಲ್ಲಿ 9 ಭರ್ಜರಿ ಸಿಕ್ಸರ್, 17 ಬೌಂಡರಿಗಳನ್ನು ಬಾರಿಸಿದರು. ಅನುಭವಿಗಳಾದ ಡೇವಿಡ್ ವಾರ್ನರ್ (53) ಮತ್ತು ಸ್ಟೀವ್ ಸ್ಮಿತ್ (ಔಟಾಗದೇ 63) ಅವರೂ ಅರ್ಧ ಶತಕಗಳನ್ನು ಗಳಿಸಿದ್ದರಿಂದ ತಂಡದ ಗೆಲುವು ನಿರೀಕ್ಷೆಗಿಂತ ಸುಲಭವಾಯಿತು
ಸ್ಕೋರುಗಳು:
ಬಾಂಗ್ಲಾದೇಶ: 50 ಓವರುಗಳಲ್ಲಿ 8 ವಿಕೆಟ್‌ಗೆ 306 (ತಾಂಜಿದ್ ಹಸನ್ 36, ಲಿಟ್ಟನ್ ದಾಸ್ 36, ನಜ್ಮುಲ್ ಹುಸೇನ್ ಶಾಂತೊ 45, ತೌಹಿದ್ ಹೃದಯ್ 74, ಮಹ್ಮದುಲ್ಲಾ 32, ಮೆಹದಿ ಹಸನ್ ಮಿರಾಜ್ 29; ಸೀನ್ ಅಬೋಟ್ 61ಕ್ಕೆ2, ಆ್ಯಡಂ ಜಂಪಾ 32ಕ್ಕೆ2);
ಆಸ್ಟ್ರೇಲಿಯಾ: 44.4 ಓವರುಗಳಲ್ಲಿ 2 ವಿಕೆಟ್‌ಗೆ 307 (ಡೇವಿಡ್ ವಾರ್ನರ್ 53, ಮಿಚೆಲ್ ಮಾರ್ಷ್ ಔಟಾಗದೇ 177, ಸ್ಟೀವ್ ಸ್ಮಿತ್ ಔಟಾಗದೇ 63)
ಪಂದ್ಯದ ಆಟಗಾರ: ಮಿಚೆಲ್ ಮಾರ್ಷ್