ICC ODI Men’s OLD CUP 2023 Newzaland VS South Africa
ನ್ಯೂಜಿಲೆಂಡ್ ತಂಡವನ್ನು 190 ರನ್ಗಳಿಂದ ಬಗ್ಗುಬಡಿದ ಸೌಥ್ ಆಫ್ರಿಕಾ..!
ಪುಣೆ: ಕ್ವಿಂಟನ್ ಡಿ ಕಾಕ್ ಮತ್ತು ರಸೀ ವ್ಯಾನ್ ಡರ್ ಡಸೆ ಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ, ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 190 ರನ್ಗಳಿಂದ ಬಗ್ಗುಬಡಿಯಿತು.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿ ಕಾಕ್ ಮತ್ತು ರಾಸ್ಸಿ ಡಸ್ಸೆನ್ ಅವರ ಶತಕಗಳ ನೆರವಿನಿಂದ 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 357 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ತಂಡ 35.3 ಓವರ್ಗಳಲ್ಲಿ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 167 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು 2023ರ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ನ ಸತತ ಮೂರನೇ ಸೋಲಾಗಿದೆ.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ 50 ಓವರ್ಗಳಲ್ಲಿ 4 ವಿಕೆಟ್ಗಳಿಗೆ 357: (ಕ್ವಿಂಟನ್ ಡಿ ಕಾಕ್ 114, ತೆಂಬಾ ಬವುಮಾ 24, ರಸೀ ವ್ಯಾನ್ ಡರ್ ಡಸೆ 133, ಡೇವಿಡ್ ಮಿಲ್ಲರ್ ಔಟಾಗದೆ 53, ಟಿಮ್ ಸೌಥಿ 77ಕ್ಕೆ 2, ಟ್ರೆಂಟ್ ಬೌಲ್ಟ್ 49ಕ್ಕೆ 1)
ನ್ಯೂಜಿಲೆಂಡ್: 35.3 ಓವರ್ಗಳಲ್ಲಿ 167: (ವಿಲ್ ಯಂಗ್ 33, ಡೆರಿಲ್ ಮಿಚೆಲ್ 24, ಗ್ಲೆನ್ ಫಿಲಿಪ್ಸ್ 60, ಕೇಶವ್ ಮಹಾರಾಜ್ 46ಕ್ಕೆ 4, ಮಾರ್ಕೊ ಜಾನ್ಸೆನ್ 31ಕ್ಕೆ 3, ಜೆರಾಲ್ಡ್ ಕೊಯೆಟ್ಜಿ 41ಕ್ಕೆ 2)
ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 190 ರನ್ ಗೆಲುವು