ಒಂದು ಲಕ್ಷ ಕೋಟಿ ರೂ ಅನುದಾನ ತಂದಿದ್ದೇನೆ –
ರಮೇಶ ಜಿಗಜಿಣಗಿ
ಮೋದಿಜಿ ಮತ್ತೊಮ್ಮೆ ಪ್ರಧಾನಿ ಯಾಗಲು ಬಿಜೆಪಿಗೆ ಮತ ನೀಡಿ : ಅಭ್ಯರ್ಥಿ ರಮೇಶ್ ಜಿಗಜಿಣಿಗಿ
ಇಂಡಿ : ವಿಜಯಪುರ ಜಿಲ್ಲೆಯ ಅಭಿವೃದ್ದಿಗೆ ಒಂದು ಲಕ್ಷ
ಕೋಟಿ ರೂ ಅನುದಾನ ತಂದಿದ್ದೇನೆ ಎಂದು ಹಾಲಿ
ಸಂಸದ ರಮೇಶ ಜಿಗಜಿಣಗಿ ಹೇಳಿದರು. ಅವರು ತಾಲೂಕಿನ ಹಿರೇಬೇವನೂರ ಗ್ರಾಮದ ಶ್ರೀ
ಮಲ್ಲಿಕಾರ್ಜುನ ದೇವಸ್ಥಾನದ ಆವರಣದ ಸಮೀಪ
ಬಿಜೆಪಿ ಪಕ್ಷದ ಚುನಾವಣೆ ಪ್ರಚಾರಾರ್ಥ ನಡೆದ
ಸಭೆಯಲ್ಲಿ ಮಾತನಾಡುತ್ತಿದ್ದರು.
ಕೂಡಗಿ ಗ್ರಾಮದಲ್ಲಿ ಎನ್‍ಟಿಪಿಸಿ, ವಿಜಯಪುರಕ್ಕೆ
ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರೆಗಳು, ರೇಲ್ವೆ
ಮೇಲು ಸೇತುವೆ, ಬ್ರಾಡಗೇಜ್ ಅಗಲೀಕರಣ, ರೇಲ್ವೆಗೆ ವಿದ್ಯುತ್, ಜಲ ಜೀವನ ಮಿಷನ್ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಅನುದಾನ ತಂದು ಪ್ರಗತಿ ಪೂಕರ ಕೆಲಸ ಮಾಡಿದ್ದೇನೆ ಎಂದರು. ಈಗಾಗಲೇ ನನಗೆ ಆರು ಬಾರಿ ಶಾಸಕನಾಗಿ ಮೂರು ಬಾರಿ ಚಿಕ್ಕೋಡಿ ಸಂಸದ ನಾಗಿ, ವಿಜಯಪುರದಿಂದ ಎರಡು ಬಾರಿ ಸಂಸದನಾಗಿ ಆಯ್ಕೆ ಮಾಡಿದ್ದೀರಿ. ನಾನು ತಮ್ಮ ಉಪಕಾರ ಎಂದಿಗೂ ಮರೆಯುವದಿಲ್ಲ ಎಂದ ಅವರು ಮೋದಿಯವರು ಮತ್ತೊಮ್ಮೆ ಪ್ರಧಾನಿ ಯಾಗಲು ಬಿಜೆಪಿಗೆ ಮತ ನೀಡಲು
ಕೇಳಿಕೊಂಡರು.
ಹಿರೇಬೇವನೂರ ಬಿಜೆಪಿ ಮುಖಂಡ ಬಿ.ಎಸ್.ಪಾಟೀಲ
ಮಾತನಾಡಿ ಜಿಗಜಿಣಗಿಯವರು ಅಕ್ಕಲಕೋಟ ವಿಜಯಪುರ ರಾಷ್ಟ್ರೀಯ ಹೆದ್ದಾರೆ ಒಂದು ಸಾವಿರ
ಕೋಟಿ ಅನುದಾನ ತಂದಿದ್ದು ಅದು ಹಿರೇಬೆವನೂರ ಗ್ರಾಮದಿಂದಲೇ ಹೋಗುತ್ತದೆ. ಹಾಗಾದರೆ ಗ್ರಾಮದ ಅಭಿವೃದ್ದಿ ಯಾಗುತ್ತದೆ ಎಂದರು.
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ನಿಂಬೆ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ವಿಪ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ ಈ ಬಾರಿ ಬಿಜೆಪಿ ಜೆಡಿ ಮೈತ್ರಿ ಇದ್ದು
ಚಿನ್ನೆ ಕಮಲ ಗುರುತಿಗೆ ಮತ ನೀಡಲು ಬಿಜೆಪಿ ಜೆಡಿ
ಎಸ್ ದವರು ಮತದಾರರಲ್ಲಿ ವಿನಂತಿಸಲು
ಕೇಳಿಕೊಂಡರು.
ಸಮಾರಂಭದಲ್ಲಿ ಶೀಲವಂತ ಉಪರಾಣಿ,ಅನೀಲಗೌಡ
ಜಮಾದಾರ, ರವಿ ವಗ್ಗೆ, ಹಿರೇಬೇವನೂರ ಮಹಾಶಕ್ತಿ
ಕೇಂದ್ರದ ಅಧ್ಯಕ್ಷ ಆರ್.ಡಿ.ಪಾಟೀಲ, ಗ್ರಾ.ಪಂ ಮಾಜಿ
ಅಧ್ಯಕ್ಷ ಜೆಡಿ ಎಸ್ ಧುರೀಣ ಮುತ್ರಪ್ಪ ಚಿಕ್ಕಬೇವನೂರ,
ನಿಂಗಪ್ಪ ತಾಂಬೆ ಮತ್ತಿತರಿದ್ದರು.
ಇಂಡಿ ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ
ಚುನಾವಣೆ ಪ್ರಚಾರಾರ್ಥ ನಡೆದ ಸಭೆಯಲ್ಲಿ
ರಮೇಶ ಜಿಗಜಿಣಗಿ ಮಾತನಾಡಿದರು.