ಹುಬ್ಬಳ್ಳಿ : ಪತ್ನಿಯ ಮೇಲೆ ಪತಿ ಹಲ್ಲೆಗೈದಿದ್ದು ಖಂಡನೀಯ. ಇನ್ನೂ ಜೀವನ್ಮರಣ ಹೋರಾಟದಲ್ಲಿದ್ದು ಅವಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ವಸಂತ ನಾಡಜೋಶಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಹಿಂದೂ ಧರ್ಮದ ಹೆಣ್ಣುಮಕ್ಕಳು ಲವ್ ಜಿಹಾದ್ ಗೆ ಒಳಪಡುತ್ತಿದೆ. ನಾನಾ ಆಮಿಷ ಒಡ್ಡಿ, ಕುಟುಂಬದ ಸದಸ್ಯರಿಗೂ ತಿಳಿಯದಂತೆ ಮದುವೆಯಾಗಿ ತಮ್ಮ ಧರ್ಮದ ಆಚರಣೆ ಮತ್ತು ಆಹಾರ ಪದ್ಧತಿಗಳನ್ನೆ ಕಡ್ಡಾಯವಾಗಿ ಅನುಸರಿಸುವುದು. ಅಲ್ಲದೇ ಇದರಿಂದಾಗಿ ಮಾನಸಿಕ ಹಾಗೂ ದೈಹಿಕ ಹಿಂಸಾಚಾರ, ದಬ್ಬಾಳಿಕೆಯಿಂದಾಗಿ ಹೆಣ್ಣುಮಕ್ಕಳು ನಲಗುವಂತಾಗಿದೆ. ಅದಕ್ಕಾಗಿ ಇಂತಹ ಕ್ರೂರಿ ಹಾಗೂ ಸಮಾಜಘಾತಕರನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು ಎಂದರು.
ಎ.ಸಿ.ಗೋಪಾಲ, ಜಯತೀರ್ಥ ಕಟ್ಟಿ, ಸುನೀಲ ಗುಮಾಸ್ತೆ, ಮುರಳಿ ಕರ್ಜಗಿ, ವಿಜಯ ನಾಡಜೋಶಿ, ದತ್ತಮೂರ್ತಿ ದತ್ತಮೂರ್ತಿ ಕುಲಕರ್ಣಿ, ಡಾ. ಬಿ.ಬಿ.ಪಾಟೀಲ್, ಡಿ.ಪಿ.ಪಾಟೀಲ್, ಮನೋಹರ ಪರ್ವತಿ ಉಪಸ್ಥಿತರಿದ್ದರು