ವಿಜಯಪುರ : ಮೊಸರು ನಾಡಿನ ಮುಳುಗಡೆ ಗ್ರಾಮಗಳನ್ನು ಅಭಿವೃದ್ಧಿ ಪಡೆಸಬೇಕು ಎಂದು ಆಗ್ರಹಿಸಿ ನಗರದ ಡಿಸಿ ಕಚೇರಿಯ ಆವರಣದಲ್ಲಿ ಕೃಷ್ಣಾ ತೀರ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಹೋರಾಟ ಸಮಿತಿಯಿಂದ ಪ್ರತಿಭಟನೆ ಮಾಡಲಾಯತು.
ಬಾಗಲಕೋಟ ಮಾದರಿಯಲ್ಲಿ ಕೊಲ್ಹಾರ ಪಟ್ಟಣ ಅಭಿವೃದ್ಧಿ ಮಾಡಬೇಕು. ಪಂಚಾಯತಿಗಳಿಗೆ ಶೀಘ್ರದಲ್ಲೇ ಉತಾರೆ ಹಂಚಿಕೆ ಮಾಡಬೇಕು. ಪುನರ್ ವಸತಿ ಗ್ರಾಮ ಸುತ್ತ ರೈತರಿಗಾಗಿ ತಿಪ್ಪೆಗುಂಡಿ, ಬಣವಿ, ದಡ್ಡಿಗಾಗಿ ಜಾಗ ಸೇರಿದಂತೆ 10ಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಬೇಕು ಎಂದು ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.