ಇಂಡಿ : ಧರ್ಮ ಬಡವ, ಶ್ರೀಮಂತ, ಉಚ್ಚ ಮತ್ತು ಕೀಳ ಎಂಬ ಮನೋಭಾವನೆ ತೊರೆದು ಧರ್ಮದ ಅಂಗಳದಲ್ಲಿ ಸಮಾನತೆಯ ಭಕ್ತಿ ಮತ್ತು ಸಮನ್ವಯ ನೀಡುತ್ತದೆ. ಧರ್ಮದ ನೆರಳಿನಲ್ಲಿ ಎಲ್ಲ ಮಾನವರ ಮೇಲೆ ಸದಾ ಪ್ರೀತಿ, ಮಮತೆ ಹುಟ್ಟಬೇಕು ಎಂದು ಉದ್ಯಮಿ ಪ್ರದೀಪ ಬಸಯ್ಯ ಗುತ್ತೇದಾರ ಹೇಳಿದರು.
ಶುಕ್ರವಾರ ತಾಲೂಕಿನ ತಾಂಬಾ ಗ್ರಾಮದಲ್ಲಿ ಅಂಬಾಭವಾನಿ ಎಜುಕೇಶನ್ ಟ್ರಸ್ಟ ಹಾಗೂ ಜಗದಂಬಾ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ನಾಡದೇವಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ಧರ್ಮದ ನೆಲೆಗಟ್ಟಿನ ಮೇಲೆ ಮಾನವರು ಬದುಕಬೇಕು. ರೈತರ ಬಾಳು ಸಮೃದ್ದಿಯಾಗಬೇಕು. ಸರ್ವಧರ್ಮದ ಚಿಂತನೆಯಲ್ಲಿ ಮಾನವ ಸಾಮರಸ್ಯವನ್ನು ಕಾಪಾಡಿಕೊಂಡು ಬದುಕಬೇಕು. ಎಲ್ಲ ಧರ್ಮಿಯರು ಮಾನವಿಯತೆಯಿಂದಲೇ ಬದುಕುತ್ತಾರೆ ಧರ್ಮದಿಂದ ವಿಶ್ವಕ್ಕೆ ಶಾಂತಿ ಸಿಗುತ್ತದೆ. ಮಾನವ ಧರ್ಮದಲ್ಲಿ ಬದುಕುವವರು ಸಹನೆ ಶಾಂತಿ, ಪ್ರೀತಿ, ಪರೋಪಕಾರ ಮುಂತಾದ ಗುಣಗಳಿಂದ ಬದುಕಬೇಕು. ದೈವ ಋಣ ತಂದೆ-ತಾಯಿ ಋಣ ಮತ್ತು ಸಮಾಜದ ಋಣ, ಭೂಮಿಯ ಋಣ ನಾವೆಂದಿಗೂ ತೀರಿಸಲಿಕ್ಕೆ ಸಾಧ್ಯವಿಲ್ಲ. ಕುಟುಂಬದಲ್ಲಿ ಹೆಣ್ಣು ಸುಖವಾಗಿ, ನೆಮ್ಮದಿಯಾಗಿ ಹಸನ್ಮೂಖಿಯಾಗಿ ಇರಬೇಕು. ಒಂದುವೇಳೆ ಕುಟುಂಬದಲ್ಲಿರುವ ಮಹಿಳೆ ನೊಂದುಕೊಂಡರೆ ಅವಳಿಗೆ ಕಷ್ಟ ನೀಡಿದರೆ ಕುಟುಂಬದಲ್ಲಿ ಸುಖ, ನೆಮ್ಮದಿ ಕಾಣಲು ಸಾಧ್ಯವಿಲ್ಲ ಎಂದರು.
ವೇದಮೂರ್ತಿ ದಾನಯ್ಯ ವಸ್ತ್ರದ ಜಗದಂಬಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ ಚವ್ಹಾಣ, ಶರಣು ಕಾಂದೆ, ವಿಜಯಕುಮಾರ ದೊಡ್ಡಮನಿ, ರೇವಪ್ಪ ಉದನೂರ, ಸಿದ್ದು ಹತ್ತಳ್ಳಿ ಉಪಸ್ಥಿತರಿದ್ದರು.