ಇಂಡಿ : ತಾಲೂಕಿನ ಸುಕ್ಷೇತ್ರ ಬೆನಕ್ಕನಹಳ್ಳಿ ಗ್ರಾಮದಲ್ಲಿ ನಡೆಯುವ ಇಷ್ಟಲಿಂಗ ಪೂಜಾ ಹಾಗೂ 18 ಕೋಟಿ ಜಪಯಜ್ಞ ಕಾರ್ಯಕ್ರಮದ ಅಂಗವಾಗಿ ಇಂದು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ ಶ್ರೀ ಅಡವಿಲಿಂಗ ಮಾಹಾರಾಜರ ಸತ್ ಸಂಕಲ್ಪಕ್ಕೆ ಓಗೋಟು ತಾಲೂಕಿನ ಅಂಜುಟಗಿ, ಭತಗುಣಕಿ, ಅಹಿರಸಂಗ, ಲಚ್ಚ್ಯಾಣ, ಮಾವಿನಹಳ್ಳಿ, ಆಳೂರ, ಗ್ರಾಮಗಳಿಗೆ ಶ್ರೀಗಳೊಂದಿಗೆ ಪ್ರತಿ ಗ್ರಾಮಗಳಲ್ಲಿ ಬೆಟ್ಟಿ ನೀಡಿದರು.
ಇನ್ನೂ ಲಚ್ಯಾಣದ ಶ್ರೀ ಸಿದ್ದಲಿಂಗೇಶ್ವರ ಮಠದ ಆವರಣದ ಸಭೆಯಲ್ಲಿ ಬಿ ಡಿ ಪಾಟೀಲ ಮಾತನಾಡಿ, ಶ್ರೀ ಅಡವಿಲಿಂಗ ಮಹಾರಾಜರು ಮಾನವ ಕುಲಕೋಟಿಯ ಕಲ್ಯಾಣಕ್ಕಾಗಿ 18 ಕೋಟಿ ಜಪಯಜ್ಞ ಹಾಗೂ ಮೃತ್ಯುಂಜಯ ಜಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ತಾಲೂಕಿನ ಜನತೆ ಸದುಪಯೋಗ ಪಡೆದುಕೊಳ್ಳಬೇಕು ಎಂದರು.