ಲಿಂಗಸೂಗೂರು: ಇದೇ ತಿಂಗಳು 28, 29, 30, ರಂದು ನಡೆಯುವ ತಾಯಿ ಹುಲಿಗೆಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ತೊಂಡಿಹಾಳ ಗ್ರಾಮದಲ್ಲಿ ಲಿಂಗಸೂಗೂರು ತಹಶಿಲ್ದಾರ ಬಲರಾಮ ಕಟ್ಟಿಮನಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಬಾವಿ ಸಭೆ ನಡೆಯಿತು.
ಈ ವೇಳೆ ತಹಶಿಲ್ದಾರ ಬಲರಾಮ ಕಟ್ಟಿಮನಿ ಮಾತನಾಡಿ ಹುಲಿಗೆಮ್ಮ ದೇವಿಯ ಆಡಳಿತ ಮಂಡಳಿಯವರು ದಿನ ನತ್ಯ ಪೂಜೆ ಮಾಡುವ ಹಾಗೆ ಕರೋನಾ ನಿಯಮಗಳನ್ನು ಪಾಲಿಸಿ ದೇವಿಯ ಪೂಜಾ ಕೈಕಂರ್ಯಗಳನ್ನು ಕೈಗೊಳ್ಳಬೇಕು. ದೇವಿಯ ರಥ ಎಳೆಯಲು ಅವಕಾಶವಿರುವದಿಲ್ಲ. ಅಲ್ಲದೆ ಗ್ರಾಮದಲ್ಲಿ ಯಾವುದೇ ಅಂಗಡಿ ಮಗ್ಗಟ್ಟುಗಳನ್ನು ಹಾಕುವಂತಿಲ್ಲ. ಇನ್ನು ಎರಡು ಡೋಸ್ ಕರೋನಾ ಲಸಿಕೆ ಪಡೆದವರಿಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಕಂದಾಯ, ಪೊಲೀಸ್, ಅಬಕಾರಿ, ಆರೋಗ್ಯ, ಶಿಶು ಅಭಿವೃಧ್ಧಿ, ಕೆಇಬಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.