ರಾಯಚೂರು: ಹಿಂದೂಸ್ತಾನ್ ಪೆಟ್ರೋಲಿಯಂ ಕರ್ಪೊರೇಷನ್ ಲಿಮಿಟೆಡ್ ಕಂಪನಿಯ (ಹೆಚ್‌ಪಿಸಿಎಲ್) ಆಡಳಿತ ಮಂಡಳಿಯ ಸ್ವತಂತ್ರ ನಿರ್ದೇಶಕರಾಗಿ ಡಾ.ನಾಗರಾಜ ಭಾಲ್ಕಿ ಅವರು ನಾಮಕರಣಗೊಂಡಿದ್ದಾರೆ.ಕೇಂದ್ರ ಸರ್ಕಾರ ಡಾ.ನಾಗರಾಜ ಭಾಲ್ಕಿ ಅವರನ್ನು ಆಡಳಿತ ಮಂಡಳಿಗೆ ಸ್ವತಂತ್ರ ನಿರ್ದೇಶಕರನ್ನಾಗಿ ನಾಮಕರಣಗೊಳಿಸಿ, ಆದೇಶಿಸಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಯ ಆಡಳಿತ ಮಂಡಳಿಗೆ ಮುಖೇಶಕುಮಾರ ಸುರಾನ ಅಧ್ಯಕ್ಷರಾಗಿದ್ದಾರೆ. ೧೧ ಜನ ನಿರ್ದೇಶಕರಲ್ಲಿ ನಾಗರಾಜ ಭಾಲ್ಕಿ ಅವರು ಒಬ್ಬರಾಗಿದ್ದಾರೆ. ನಾಗರಾಜ ಭಾಲ್ಕಿ ಶಸ್ತ್ರ ಚಿಕಿತ್ಸಾಕರಾಗಿ ಕಳೆದ ೧೨ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಪ್ರೋಪೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಸೇವಾವಧಿಯಲ್ಲಿ ೬ ಸಾವಿರ ಶಸ್ತ್ರ ಚಿಕಿತ್ಸೆ ಕೈಗೊಂಡಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಪನ್ಯಾಸಕರಾಗಿ ಪ್ರಸ್ತುತ ಭಾರತೀಯ ವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಸ್ತ್ರ ಚಿಕಿತ್ಸಕರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ೧೮೦ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ, ಕೊರೊನಾ ಸೇವಾ ಭಾರತಿ ಕೇಂದ್ರವನ್ನು ೩೦ ದಿನಗಳ ಕಾಲ ನಿರ್ವಹಿಸಿದ್ದಾರೆ. ಇವರ ಈ ಸುಧೀರ್ಘ ಸೇವೆ ಗಮನಿಸಿ, ಕೇಂದ್ರ ಸರ್ಕಾರ ಹಿಂದೂಸ್ತಾನ್ ಪೆಟ್ರೋಲಿಯಂ ಕರ್ಪೊರೇಷನ್ ಲಿಮಿಟೆಡ್ ಕಂಪನಿಯ ಆಡಳಿತ ಮಂಡಳಿಯ ಸ್ವತಂತ್ರ ನಿರ್ದೇಶಕರನ್ನಾಗಿ ನಿಯುಕ್ತಿಗೊಳಿಸಲಾಗಿದೆ.