ಇಂಡಿ ತಾಲೂಕಿನಲ್ಲಿ ೩೯ ಮಿ.ಮಿ.ಮಳೆ
ಇಂಡಿ : ಇಂಡಿ ತಾಲೂಕಿನಲ್ಲಿ ಸೋಮವಾರ ಸೆ.೨ ರಂದು ತಾಲೂಕಿನಲ್ಲಿ ೩೯ ಮಿ.ಮಿ ಮಳೆಯಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದರೆ.
ಇಂಡಿ ೨೭.೫,ನಾದ ಬಿಕೆ ೩೫.೨, ಅಗರಖೇಡ ೫೫.೨, ಹೋರ್ತಿ ೨೦.೮, ಝಳಕಿ ೫೬ ಮೀ.ಮೀ ಮಳೆಯಾಗಿದೆ.
ರವಿವಾರ ಸೆ. ೧ ರಂದು ಇಂಡಿ ೧೫, ನಾದ ಬಿಕೆ ೮.೨, ಅಗರಖೇಡ ೨೪.೩, ಹೋರ್ತಿ ೯.೮ ಮತ್ತು ಝಳಕಿ ೧೭.೪ ಮೀ.ಮೀ ಮಳೆ ಯಾಗಿದೆ. ಮಳೆ ಬೆಳೆಗಳಿಗೆ ಅನುಕೂಲವಾಗಿದ್ದು ಯಾವದೇ ರೀತಿಯ ಹಾನಿಯಾದ ವರದಿ ಇಲ್ಲ ಎಂದು ಏವೂರ ತಿಳಿಸಿದ್ದಾರೆ.