ಅಕಾಲಿಕ ಮಳೆಗಾಳಿಗೆ ಮನೆ ಕುಸಿತ, ಪ್ರಾಣಾಪಯದಿಂದ ಪಾರಾದ ಕುಟುಂಬ..! ಎಲ್ಲಿ ಗೊತ್ತಾ..?
ಚಡಚಣ : ಅಕಾಲಿಕ ಮಳೆಗಾಳಿ ಸಹಿತ ಬಾರಿ ಮಳೆಯಿಂದ ಮನೆಯ ಮೇಲ್ಚಾವಣಿ ಸಹಿತ ಗೊಡೆ ಕುಸಿತಗೊಂಡಿದ್ದು, ಅದೃಷ್ಟವಶಾತ್ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿಯಲ್ಲಿ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ಅಕಾಲಿಕ ಸುರಿದ ಮಳೆಗಾಳಿಯ ಹಿನ್ನಲೆ ಮನೆ ಕುಸಿತವಾಗಿರುವ ಘಟನೆ ಸಂಭವಿಸಿದೆ. ಈ ಘಟನೆ ತಾಲ್ಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಲ್ಲಪ್ಪ ಗುಂಡಪ್ಪ ಪೂಜಾರಿ ಎಂಬುವರಿಗೆ ಸೇರಿದ ಮನೆ ಇದಾಗಿದೆ. ಮನೆ ಕುಸಿತದಿಂದ ಮನೆಯಲ್ಲಿ ಇದ್ದ ವಸ್ತುಗಳು ಹಾನಿಯಾಗಿವೆ.
ಇನ್ನೂ ಮನೆಯವರು ಮನೆಯ ಮುಂದೆ ಇದ್ದ ವೇಳೆ ಮನೆ ಕುಸಿತವಾಗಿದ್ದು, ಅದೃಷ್ಟವಶಾತ್ ಮನೆಯವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಳೆಯ ಅವಘಡದಿಂದ ಮನೆ ಕಳೆದುಕೊಂಡ ಪೂಜಾರಿ ಕುಟುಂಬ ಬೀದಿಗೆ ಬಂದಂತಾಗಿದೆ.