ಇಂಡಿ : ಪಟ್ಟಣದಲ್ಲಿ ನೀರು, ಚಹಾ ಉಪಹಾರ ಹಾಗೂ ಉಟದ ವ್ಯವಸ್ಥೆ ಇಲದೇ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದರು ಹಾಗೂ ಸಾರ್ವಜನಿಕ ಪ್ರಯಾಣಿಕರು ಪರದಾಟ ಪಡುವಂತಾಯಿತು. ಯಾವುದೇ ಮಾಹಿತಿ ಇಲ್ಲದೇ ದಿಢೀರ್ ನಿರ್ಧಾರ ತೆಗೆದುಕೊಂಡು ಹೊಟೆಲ್ ಬಂದ್ ಮಾಡಿದ್ದು, ಸಾರ್ವಜನಿಕರು ತುಂಬಾ ಕಷ್ಟ ಪಡುವಂತಾಯಿತು.
ಹೌದು ಪಟ್ಟಣದಲ್ಲಿ ಸಾಮಾನ್ಯ ಮತ್ತು ಪ್ರತಿಷ್ಠಿತ ಎಲ್ಲಾ ರೀತಿಯ ಹೊಟೆಲ್ ಮಾಲಿಕರು ಬೆಲೆ ಏರಿಕೆ ಹಿನ್ನೆಲೆಯಲ್ಲಿ ಹೋಟೆಲ್ ಬಂದ್ ಕರೆ ನೀಡಿ ಸಭೆ ನಡೆಸಿದರು. ವಿದ್ಯುತ್, ಗ್ಯಾಸ್, ದವಸ, ಧಾನ್ಯ ಹಾಗೂ ಸೊಪ್ಪು, ತರಕಾರಿ, ಜೊತೆಗೆ ಎಲ್ಲಾ ರೀತಿಯ ಅವಶ್ಯಕತೆ ವಸ್ತುಗಳ ಬೆಲೆ ಗಗನಕ್ಕೆತ್ತರಕ್ಕೆ ಏರಿಕೆಯಾಗಿದ್ದರಿಂದ ಬಹುತೇಕ್ ಎಲ್ಲಾ ರೀತಿಯ ಹೋಟೆಲುಗಳು, ಚಹಾದ ಗೂಡಂಗಡಿಗಳು ಹಾಗೂ ಖಾನಾವಳಿ ಬಂದ್ ಮಾಡಿ ಬೆಲೆ ಏರಿಕೆ ಬಗ್ಗೆ ಚೆರ್ಚೆ ಮಾಡಿದರು. ಆದರೆ ಹೊಟೆಲ್ ಬಂದ್ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ರೈತರು, ಬೇರೆ ತಾಲೂಕು, ಜಿಲ್ಲೆ ಹಾಗೂ ಮಹಾರಾಷ್ಟ್ರದ ಪ್ರಯಾಣಿಕರು, ಅಸ್ಪತ್ರೆಗೆ ಬಂದಿರುವ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಬಂದ್ ಬಿಸಿ ತಟ್ಟಿ, ಉಪವಾಸ ಯಾತನೆ ಅನುಭವಿಸಂತಾಯಿತು.
ನಗರದಲ್ಲಿ ಬೆಳಿಗ್ಗೆಯಿಂದಲೆ ಸಂಪೂರ್ಣ ಹೋಟೆಲ್ ಬಂದ್ ಹಿನ್ನೆಲೆಯಲ್ಲಿ ಖಾನಾವಳಿ, ಸಾವಜಿ ಹೊಟೆಲ್‌ಗಳೂ ವಹಿವಾಟು ಸ್ಥಗಿತಗೊಳಿಸಿದ್ದವು. ಇದರಿಂದ ನಾನಾ ಕಡೆಗಳಿಂದ ನಗರಕ್ಕೆ ಆಗಮಿಸಿದ್ದ ನಾಗರಿಕರು ಊಟ, ಉಪಹಾರ ಸಿಗದೇ ಪರದಾಡಿದರು. ಖಾಸಗಿ, ಸರಕಾರಿ ಕಚೇರಿಯ ಸಿಬ್ಬಂದಿ ಕೂಡ ತೊಂದರೆ ಅನುಭವಿಸಬೇಕಾಯಿತು. ಹೋಟೆಲ್‌ಗಳ ಬಂದ್ ಪರಿಣಾಮ ತಹಸೀಲ್ದಾರ, ಪುರಸಭೆ ಕಚೇರಿಯಲ್ಲಿ ಸಿಬ್ಬಂದಿ ಊಟಕ್ಕೆ ತೆರಳದೆ ಕಛೇರಿಯಲ್ಲಿ ಇದ್ದದ್ದು ಕಂಡು ಬಂತು. ಒಟ್ಟಾರೆಯಾಗಿ ಅಗತ್ಯ ವಸ್ತುಗಳ ಬೆಲೆ ಹಿನ್ನೆಲೆಯಲ್ಲಿ ಹೊಟೆಲ್ ಮಾಲಿಕರು ಬಂದ್ ಕರೆ ನೀಡಿ ಸಾಮಾನ್ಯ ಜನರಿಗೆ ಬಿಸಿ ಮುಟ್ಟಿಸಿದ್ರೋ..ಅಥವಾ ಸರಕಾರಕ್ಕೆ ಬಿಸಿ ಮುಟ್ಟಿಸಿದ್ರೂ..! ಅರ್ಥವಾಗಲಿಲ್ಲ ಎಂದು ಸಾರ್ವಜನಿಕರ ಪಿಸುಮಾತು ನಗರದಲ್ಲಿ ಕೇಳಿಬರುತಿತ್ತು. ಅದಲ್ಲದೇ ಹೋಟೆಲ್ ಮಾಲಿಕರು ಎಲ್ಲಾ ವಸ್ತುಗಳ ಬೆಲೆ ಹೆಚ್ಚಿಸುವ ಬಗ್ಗೆ ಚೆರ್ಚೆ ಮಾಡಿದರು.