ಇಂಡಿಯಲ್ಲಿ ಅಕಾಲಿಕ ಮಳೆ-ಗಾಳಿಗೆ ಲಕ್ಷಾಂತರ ಮೌಲ್ಯದ ತೋಟಗಾರಿಕೆ ಬೆಳೆ ಹಾನಿ..!
ಇಂಡಿ: ಶನಿವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ತಾಲೂಕಿನ ವಿವಿಧೆಡೆ ಗಿಡ-ಮರಗಳು ಧರೆಗುರುಳಿದ್ದು, ಬಾಳೆ, ನಿಂಬೆ, ದಾಳಿಂಬೆ ಸೇರಿದಂತೆ ಹಲವು ಬೆಳೆಗಳು ನೆಲಕಚ್ಚಿದ್ದು ರೈತರ ಬಾಳಿಗೆ ಬರೆ ಎಳೆದಂತಾಗಿದೆ.
ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಸಂದೀಪ ಧನಶೆಟ್ಟಿ
ಅವರ 6 ಎಕರೆ ಜಮೀನಿನಲ್ಲಿ ಬೆಳೆದ ಬಾಳೆ ಬೆಳೆÀ ಸಂಪೂರ್ಣ ನೆಲಕಚ್ಚಿದ್ದು ಅಂದಾಜು 20 ಲಕ್ಷಕ್ಕೂ ಅಧಿಕ ಆದಾಯ ಬರಬೇಕಾಗಿದ್ದು ಕೈ ತಪ್ಪಿದೆ. ಅಲ್ಲದೆ ದನ-ಕುರಿಗಳೀಗಾಗಿ 8 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ್ದ ಪತ್ರಾಸ್ ಶೆಡ್ ಸಹ ಗಾಳಿಗೆ ನೆಲಕಚ್ಚಿದೆ. ಆರು ಎಕರೆ ಬಾಳೆ ನಾಟಿ ಮಾಡಿದ್ದು ಇನ್ನು 15-20 ದಿನದಲ್ಲಿ
ಬಾಳೆ ಬೆಳೆ ರೈತನ ಕೈ ಸೇರುವ ಹಂತದಲ್ಲಿತ್ತು, ಆದರೆ ದುರಾದೃಷ್ಠವಶಾತ್ ಗಾಳಿ-ಮಳೆಗೆ ನೆಲಕಚ್ಚಿ ಹಾಳಾಗಿದೆ.
ಇಂಗಳಗಿ ಗ್ರಾಮದ ರೈತ ಮಲ್ಲೇಶಪ್ಪ ಬಳಬಟ್ಟಿ, ಅಶೋಕ ಬಳಬಟ್ಟಿ ಅವರ ದಾಳಿಂಬೆ, ನಿಂಬೆ, ಮಹ್ಮದ್ ಪಟೇಲ್
ಮಸಳಿ ಅವರ ಜಮೀನಿನಲ್ಲಿನ ನಿಂಬೆ, ದ್ರಾಕ್ಷಿಬೆಳೆ
ಹಾನಿಯಾಗಿದೆ. ಆಳೂರ ಗ್ರಾಮದ ಮಾಳಪ್ಪ ಬೇವನೂರ ಅವರಿಗೆ ಸೇರಿದ ಒಂದು ಎಕರೆ ಜಮೀನಿನಲ್ಲಿ ನಿಂಬೆ ಬೆಳೆ
ನೆಲಕ್ಕುರುಳಿದ್ದು, ಭೂತಾಳಿ ಪೂಜಾರಿ ಅವರ ಒಂದು
ಎಕರೆ ನಿಂಬೆ ಸಹ ನೆಲಕ್ಕಚ್ಚಿದೆ. ಒಂದುಕಡೆ ಬರದಿಂದ ತತ್ತರಿಸಿದ ಹಲವು ರೈತರಾದರೆ, ಇನ್ನೊಂದೆಡೆ ಅಕಾಳಿಕ ಮಳೆಯಿಂದಾಗಿಯೂ ಸಹ ರೈತರ ಬದುಕು ಬೀದಿಗೆ ಬಂದಂತಾಗಿದೆ.
ಈ ವರ್ಷ ಬರಗಾಲವಿತ್ತು. ಮೊದಲು ಬೋರವೆಲ್ ಹಾಗೂ ಬಾವಿಗೆ ನೀರಿದ್ದರಿಂದ ಬಾಳೆ ಬೆಳೆ ನಾಟಿ ಮಾಡಿದ್ದೆವು. ಕ್ರಮೇಶ ನೀರು ಕಡಿಮೆಯಾಗುತ್ತ ಬಂತು, ಕೊನೆಗೆ ಬೆಳೆ ಕಳೆದುಕೊಳ್ಳಬಾರದೆಂದು ನಿರ್ಧರಿಸಿ ಟ್ಯಾಂಕರ್ ಮೂಲಕ ನೀರುಣಿಸಲು ಪ್ರಾರಂಭಿಸಿದ್ದೆವು. ಆದರೆ ಈಗ ಮಳೆ-ಗಾಳಿಗೆ ಸಂಪೂರ್ಣ ಬೆಳೆ ನೆಲಕಚ್ಚಿ ಅಂದಾಜು 30 ಲಕ್ಷ ರೂಪಾಯಿ ಬೆಲೆಯ ಬಾಳೆ ಬೆಳೆ ಹಾನಿಯಾಗಿದೆ.
ಸಂದೀಪ ಧನಶೆಟ್ಟಿ, ರೈತ.
ಇಂಡಿ ಭಾಗದಲ್ಲಿ ಮಳೆಗೆ ತೋಟಗಾರಿಕೆ ಬೆಳೆ ಹಾನಿಯಾಗಿವೆ. ಗ್ರಾಮಲೆಕ್ಕಾಧಿಕಾರಿಗಳು ಹಾಗೂ ನಮ್ಮ ಇಲಾಖಾ ಸಿಬ್ಬಂದಿ ಬೆಳೆ ಹಾನಿಯಾದ ರೈತರ ತೋಟಗಳಿಗೆ ಹೋಗಿ ಸರ್ವೆ ಮಾಡುತ್ತಿದ್ದಾರೆ. ಎಲ್ಲ ವಿವರ ಪಡೆದು ಬೆಳೆ ಹಾನಿಯ ಬಗ್ಗೆಸರಕಾರಕ್ಕೆ ವರದಿ ಸಲ್ಲಿಸುತ್ತೇವೆ.
ಹೆಚ್.ಎಸ್. ಪಾಟೀಲ,
ತೋಟಗಾರಿಕೆ ಇಲಾಖೆ, ಹಿರಿಯ ನಿರ್ದೇಶಕ ಇಂಡಿ.
ಇಂಡಿ: ಇಂಗಳಗಿ ಗ್ರಾಮದ ಸಂದೀಪ ಧನಶೆಟ್ಟಿ ಅವರಿಗೆ ಸೇರಿದ 6 ಎಕರೆಯಲ್ಲಿ ಬೆಳೆದ ಬಾಳೆ ನೆಲಕಚ್ಚಿದ್ದು.
ಇಂಡಿ: ಇಂಗಳಗಿ ಗ್ರಾಮದ ಸಂದೀಪ ಧನಶೆಟ್ಟಿ ಅವರು ದನ-ಕರುಗಳಿಗೆ ಕಟ್ಟಿಸಿದ್ದ ಪತ್ರಾಸ್ ಶೆಡ್ ಗಾಳಿಗೆ ನೆಲಕ್ಕುರುಳಿದ್ದು.