ಇಂಡಿ ನಗರದಲ್ಲಿ ಡಿ- 5 ರಿಂದ ಐತಿಹಾಸಿಕ ಕಾರ್ಯಕ್ರಮ..! ಹೇಗಿರುತ್ತೆ..? ಯಾರೆಲ್ಲಾ ಪಾಲ್ಗೊಳ್ಳುತ್ತಾರೆ ಗೊತ್ತಾ..?
ಇಂಡಿ : ವಿಶೇಷ ಲೇಖನ : ಸುಪ್ರಸಿದ್ಧ ಲಿಂಬೆನಾಡು, ಭೀಮಾತೀರ ಖ್ಯಾತಿಯ ಇಂಡಿ ನಗರ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷೀಕರಿಸುವ ಸುಸಮಯ ಬಂದಿದೆ. ಮೋಕ್ಷಕ್ಕೆ ದಾರಿ ಯಾವುದಯ್ಯಾ ಅನ್ನದಾನ , ವಿದ್ಯಾಧಾನ ಎಂದರಯ್ಯ ನಮ್ಮ ಅಭಿನವ ಮುರುಘೇಂದ್ರ ಶಿವಾಚಾರ್ಯರು. ಸಾಮೂಹಿಕ ವಿವಾಹ ಮಾಡುವ ಸರದಾರರೆಂದು ಹಳ್ಳಿಗರು ಇವರನ್ನು ಇಂಡಿ ತಾಲ್ಲೂಕಿನ ಕರೆಯುತ್ತಾರೆ.
ಹೌದು ಡಿ – 5 ರಿಂದ ಡಿ 10 ವರೆಗೆ ಶಿರಶ್ಯಾಡ ಸಂಸ್ಥಾನ ಮಠದ ಇಂಡಿ ಶಾಖಾ ಮಠದಲ್ಲಿ ನಾಡಿನ ಅನೇಕ ಹೆಸರಾಂತ ಹಾಗೂ ವಿಶೇಷ ಮಠಾಧೀಶರದಿಂದ ಉಪದೇಶಾಮೃತ್ ಹಾಗೂ ಧರ್ಮಸಭೆ ಜರುಗುತ್ತದೆ. ಅದಲ್ಲದೇ ರಾಜ್ಯದ ಪ್ರಭಾವಿ ಜನಪ್ರತಿನಿಧಿಗಳಯ ರಾಜಕೀಯ ಗಣ್ಯರು ಪಾಲ್ಗೊಳ್ಳತ್ತಾ ಇದ್ದಾರೆ. ಹೌದು ಇದು ಯಾವ ಕಾರ್ಯಕ್ರಮ, ಯಾವ ಹೆಸರಾಂತ ಪ್ರವಚನಕಾರರು, ಯಾವ ಪ್ರಭಾವಿ ಸಚಿವರು ಹಾಗೂ ನಾಯಕರು ಪಾಲ್ಗೊಳ್ಳುತ್ತಾರೆ ತಿಳಿದುಕೊಳ್ಳವ ಉತ್ಸಾಹ ಇದೆ ಅಲ್ವಾ..! ಹಾಗಾದರೆ ಸ್ಮಾಲ್ ಸ್ಟೋರಿಗೆ ಹೋಗುವ ಮುನ್ನ ವೈಸ್ ಆಪ್ ಜನತಾ ವನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಿ.
ಹೌದು ಇಂಡಿ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಬಡ ಮಕ್ಕಳ ಕಲ್ಯಾಣಕ್ಕಾಗಿ ಶಿರಶ್ಯಾಡ ಸಂಸ್ಥಾನ ಹಿರೇಮಠದ ಇಂಡಿ ಶಾಖಾ ಮಠದಲ್ಲಿ ನಿರ್ಮಾಣಗೊಳ್ಳುತ್ತೀರುವ ಬಡಮಕ್ಕಳ ಶಿಕ್ಷಣ ಮತ್ತು ಉಚಿತ ಅನ್ನಪ್ರಸಾದ ಹಾಗೂ ವಸತಿ ನಿಲಯದ ಮಹಾದ್ವಾರದ ಪ್ರಥಮ ಹೊಸ್ತಿಲ ಪೂಜಾ ಕಾರ್ಯಕ್ರಮ ನಿಮತ್ಯ ಪ್ರವಚನ ಜರುಗುತ್ತದೆ.
ಮೊದಲೇ ದಿನ ಡಿ – 5 ಶುಕ್ರವಾರ ಸಾಯಂಕಾಲ 6 ಘಂಟೆಗೆ ಬಾಲಗಾಂವ ಮಠದ ನಾಡಿನ ಹೆಸರಾಂತ ಪ್ರವಚನಕಾರರು ಪೂಜ್ಯ ಶ್ರೀ ಅಮೃತಾನಂದ ಪೂಜ್ಯರಿಂದ ಉಪದೇಶಾಮೃತ ಜರುಗುತ್ತದೆ.
ಈ ಕಾರ್ಯಕ್ರಮವನ್ನು ಉದ್ಘಾಟನೆ ರಮೇಶ ಜಿಗಜಿಣಗಿ ಲೋಕಸಭಾ ಸದಸ್ಯರು ನೆರೆವರಿಸಿಲಿದ್ದಾರೆ. ಇನ್ನೂ ಇಂಡಿ ವಿಧಾನ ಸಭಾ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸಿಲಿದ್ದಾರೆ.
ಡಿ – 6 ಶನಿವಾರ, ಸಾಯಂಕಾಲ 6 ಘಂಟೆಗೆ ಐದು ಶತಮಾನಗಳ ಇತಿಹಾಸ ಹೊಂದಿರುವ ತಾಳಿಕೋಟೆ ವಿರಕ್ತಮಠವು ಇಲ್ಲಿಯವರೆಗೆ 14 ಪೀಠಾಧಿಪತಿಗಳನ್ನು ಕಂಡಿದೆ. ಇಂತಹ ಸುದೀರ್ಘ ಪರಂಪರೆಯಲ್ಲಿ 13ನೆಯ ಪೀಠಾಧಿಪತಿ ಶ್ರೀ ಖಾಸ್ಗತೇಶ್ವರ ಸ್ವಾಮಿಗಳನ್ನು ಈ ನಾಡು ಕಂಡಿದೆ. ಇಂತಹ ಪರಂಪರೆಯ ಪರಮ ಪೂಜ್ಯ ಶ್ರೀ ಸಿದ್ದಲಿಂಗ ದೇವರು ಖಾಸ್ಗತೇಶ್ವರ ಮಠ ತಾಳಿಕೋಟೆ ಪೂಜ್ಯರಿಂದ ಪ್ರವಚನ ಜರುಗುಲಿದೆ ಡಿ – 6 ರಂದು ಜರುಗುಲಿದೆ.
ಈ ಕಾರ್ಯಕ್ರಮ ಉದ್ಘಾಟನೆಯನ್ನು ಸಚಿವ ಶಿವಾನಂದ ಪಾಟೀಲ ನೆರೆವರಿಸಲಿದ್ದಾರೆ. ಅಧ್ಯಕ್ಷತೆ ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ವಹಿಸಿಕೊಳ್ಳಲಿದ್ದಾರೆ. ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಜ್ಯೋತಿ ಬೆಳಗಿಸಿಲಿದ್ದಾರೆ.
ಡಿ – 7 ರವಿವಾರ , ಸಾಯಂಕಾಲ 6 ಘಂಟೆಗೆ ಶ್ರೀ ಮಡಿವಾಳೇಶ್ವರ ಮಠ ಕಡಕೋಳ, ಷ.ಬ್ರ ಡಾ.ರುದ್ರಮುನಿ ಶಿವಾಚಾರ್ಯ ಪೂಜ್ಯರಿಂದ ಪ್ರವಚನ ಜರುಗುಲಿದೆ.
ಈ ಕಾರ್ಯಕ್ರಮವನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಉದ್ಘಾಟಸಲಿದ್ದಾರೆ. ಅಧ್ಯಕ್ಷತೆ ಎಸ್ ಎ ಡೋಮನಾಳ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ವಹಿಸಲಿದ್ದಾರೆ.
ಡಿ – 8 ಸೋಮವಾರ , ಸಾಯಂಕಾಲ 6 ಘಂಟೆಗೆ ಶ್ರೀ ಮಹಾಂತೇಶ್ವರ ಮಠ ಚಿನ್ಮಯಗಿರಿ ಚೌಡಾಪುರ ಪೂಜ್ಯ ಶ್ರೀ ಷ.ಬ್ರ ವೀರಮಹಾಂತ ಶಿವಾಚಾರ್ಯರು ಇವರಿಂದ ಪ್ರವಚನ ಜರುಗುತ್ತದೆ.
ಈ ಕಾರ್ಯಕ್ರಮವನ್ನು ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆ ಮಧುವನ ಹೋಟೆಲ್ ಮಾಲಿಕರಾದ ಬಾಬುಗೌಡ ಬಿರಾದಾರ ವಹಿಸಿಕೊಳ್ಳಲಿದ್ದಾರೆ. ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಜ್ಯೋತಿ ಬೆಳಿಗಿಸುತ್ತಾರೆ.
ಡಿ – 9 ಮಂಗಳವಾರ ಸಾಯಂಕಾಲ 6 ಸಾರಂಗಮಠ ಸಿಂದಗಿಯ ಡಾ ಪ್ರಭುಸಾರಂಗ ಶಿವಾಚಾರ್ಯರಿಂದ ಪ್ರವಚನ ಜರುಗುತ್ತದೆ.
ಈ ಕಾರ್ಯಕ್ರಮವನ್ನು ನಾನಾಗೌಡ ಪಾಟೀಲ ರಾಜ್ಯ ಉಪಾಧ್ಯಕ್ಷರು ಜೆಡಿಎಸ್ ಪಕ್ಷ ಇವರಿಂದ ಉದ್ಘಾಟನೆ ಗೊಳಿಸಲಿದ್ದಾರೆ. ಅಧ್ಯಕ್ಷತೆ ಉದ್ದಿಮೆದಾರರು ಶ್ರೀಪತಿಗೌಡ ಬಿರಾದಾರ ವಹಸಿಕೊಳ್ಳಲಿದ್ದಾರೆ.
ಇನ್ನೂ ಇಡೀ ಕಾರ್ಯಕ್ರಮದ ಪ್ರಮುಖಘಟ್ಟ ಡಿ -10 ರಂದು ಮಧ್ಯಾಹ್ನ 3 ಘಂಟೆಗೆ ಸುಮಂಗಲೆಯರ ಕುಂಭ – ಕಳಸದೊಂದಿಗೆ ಶ್ರೀಶ್ರೀಶ್ರೀ1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೊಮೇಶ್ವರ ಶಿವಾಚಾರ್ಯ ಭಗವತ್ಪಾದಂಗಳವರು ಮಹಾಸಂಸ್ಥಾನ ಮಹಾಪೀಠ ರಂಭಾಪುರಿ ಬಾಳೆಹೊನ್ನುರ ಭಗವತ್ಪಾದರ ರಥದ ಮೆರವಣಿಗೆ ನಗರದ ಬಸವೇಶ್ವರ ವೃತದಿಂದ ಪ್ರಾರಂಭಗೊಂಡು ಶ್ರೀಮಠಕ್ಕೆ ತಲುಪುತ್ತದೆ.
ಇನ್ನೂ ಡಿ 10 ರಂದು ಮಹಾದ್ವಾರದ ಹೊಸ್ತಿಲು ಪೂಜೆ ಹಾಗೂ ಧರ್ಮಸಭೆ ಮತ್ತು 5001 ಮಹಾಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಮ್ ಬಿ ಪಾಟೀಲ ನೆರೆವರಿಸಲಿದ್ದಾರೆ. ಜೆಡಿಎಸ್ ರಾಜ್ಯಧ್ಯಕ್ಷ ನಿಖಿಲ ಕುಮಾರಸ್ವಾಮಿ ಜ್ಯೊತಿ ಬೆಳಗಿಸಲಿದ್ದಾರೆ. ಅಧ್ಯಕ್ಷತೆ ಸಂಸದ ರಮೇಶ ಜಿಗಜಿಣಗಿ ವಹಿಸಲಿದ್ದಾರೆ. ಈ ಕಾರ್ಯಕ್ರಮ ಕೇಂದ್ರ ಸಚಿವ ವಿ ಸೊಮಣ್ಣ, ಬಿಜೆಪಿ ರಾಜ್ಯಧ್ಯಕ್ಷ ಬಿ ವಾಯ್ ವಿಜಯೇಂದ್ರ, ಶಾಸಕ ಯಶವಂತರಾಯಗೌಡ ಪಾಟೀಲ, ವಿ ಆರ್ ಎಲ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ ವಿಜಯಾನಂದ ಸಂಕೇಶ್ವರ , ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಸಚಿವ ಬಿ ಶ್ರೀ ರಾಮಲು, ನಿಕಟ ಪೂರ್ವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶ ಶಂಕರಗೌಡ ಪಾಟೀಲ ವಹಿಸಲಿದ್ದಾರೆ.
ಇದು ಲಿಂಬೆ ನಾಡಿನಲ್ಲಿ ಹೊಸಭರವಸೆ ಮತ್ತು ಇತಿಹಾಸ ಸೃಷ್ಟಿಸುವ ಕಾರ್ಯಕ್ರಮವಾಗಿದ್ದು, ನಿರಂತರ ಅನ್ನಪ್ರಸಾದ ಜೊತೆಯಲ್ಲಿ ಅನೇಕ ಧಾರ್ಮಿಕ ಸಾಂಸ್ಕೃತಿಕ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯುತ್ತವೆ.


















