ಹಿರೇರೂಗಿ: ಯುಬಿಎಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜಯಂತಿ ಆಚರಣೆ
ಇಂಡಿ: ಶ್ರೀಕೃಷ್ಣ ಪ್ರೀತಿ, ಸಂತೋಷ, ನೈಸರ್ಗಿಕತೆಯ ಸಂಕೇತ.
ಶ್ರೀ ಕೃಷ್ಣನು ಆನಂದದ ಮೂಲವಾಗಿದ್ದು, ತನ್ನ ತ್ಯಾಗ ಮನೋಭಾವದಿಂದ ಪ್ರಸಿದ್ಧಿ ಪಡೆದ ಅವನ ನಯ-ವಿನಯ ಎಲ್ಲರಿಗೂ ಅನುಕರಣೀಯ ಎಂದು ಹೇಳಿದರು.
ಶನಿವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಶ್ರೀ ಕೃಷ್ಣ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಜನ್ಮಾಷ್ಟಮಿಯಂತಹ ಹಬ್ಬಗಳು ಜನರನ್ನು ಒಟ್ಟುಗೂಡಿಸಿ,ಅವರಲ್ಲಿ ಶಾಂತಿ, ಪ್ರೀತಿ ಮತ್ತು ಸಾಮರಸ್ಯದ ಸಂದೇಶವನ್ನು ಹರಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿದೆ ಎಂಬ ಪರಿಕಲ್ಪನೆಯನ್ನು ಈ ಜನ್ಮಾಷ್ಟಮಿಯು ಎತ್ತಿಹಿಡಿಯುತ್ತದೆ ಎಂದು ಹೇಳಿದರು.
ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ, ಶ್ರೀ ಕೃಷ್ಣನು ಬದುಕಿನ ಕತ್ತಲೆಯನ್ನು ಹೋಗಲಾಡಿಸಿ, ಜನರ ಹೃದಯದಲ್ಲಿ ಜ್ಞಾನದ ದೀಪವನ್ನು ಬೆಳಗಿಸಿದಾತ, ಎಲ್ಲರ ಜೀವನಕ್ಕೆ ಸಂತೋಷ, ಭರವಸೆ ಮತ್ತು ಆತ್ಮವಿಶ್ವಾಸ ತಂದು ಕೊಡುವ ಶಕ್ತಿ ಶ್ರೀ ಕೃಷ್ಣನಲ್ಲಿದೆ ಎಂದರು.
ಮುಖ್ಯ ಶಿಕ್ಷಕಿ ವ್ಹಿ ವೈ ಪತ್ತಾರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಎನ್ ಬಿ ಚೌಧರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.


















