ಹಿಂದುತ್ವ ಈ ನೆಲದ ಮೂಲ ಮಂತ್ರ..!
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಹಿಂದುತ್ವ ಈ ನೆಲದ ಮೂಲ ಮಂತ್ರ. ಭಾರತದ ಸುತ್ತಲೂ ಇರುವ ದೇಶದವರ ಮೂಲ ಹಿಂದುತ್ವವೇ ಆಗಿದೆ. ದೇಶದಲ್ಲಿ ಏಕರೂಪ ಕಾನೂನು ಜಾರಿಯಾಗುವವರೆಗೂ ಹಿಂದುಗಳು ಜನಸಂಖ್ಯೆ ನಿಯಂತ್ರಣ ಮಾಡಬಾರದು. ಹಿಂದು ಅಲ್ಲ ಎಂದು ಹೇಳುವಂತೆ ಹಣ ಕೊಡುತ್ತಿರುವವರಿಂದ ಹಿಂದುಗಳು ಎಚ್ಚರವಾಗಿರಬೇಕು. ಈ ದೇಶ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಯುರ್ವೇದಿಕ್ ಪಂಡಿತ, ಸಮಾಜ ಸೇವಕ ಹಣಮಂತ ಮಳಲಿ ಹೇಳಿದರು.
ಇಲ್ಲಿನ ವಿಬಿಸಿ ಪ್ರೌಢಶಾಲೆ ಮೈದಾನದಲ್ಲಿ ರವಿವಾರ ಸಂಜೆ ಹಮ್ಮಿಕೊಂಡಿದ್ದ ಬೃಹತ್ ಹಿಂದು ಸಮ್ಮೇಳನದ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು, ಕಲಿಯಗ ಆರಂಭವಾಗಿ 5127 ವರ್ಷಗಳಾಗಿವೆ. ಇದಕ್ಕೂ ಮುನ್ನ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಆಗಿ ಹೋಗಿವೆ. ನಾಸಾ ಉಪಗ್ರಹ ತೆಗೆದ ಚಿತ್ರದ ಕಾರ್ಬನ್ ಸಂಶೋಧನೆಯಿಂದ ರಾಮಸೇತುವೆ 17 ಲಕ್ಷ ವರ್ಷಗಳಷ್ಟು ಹಿಂದಿನದ್ದೆಂದು ದೃಢಪಟ್ಟಿದೆ. ಸನಾತನ ಧರ್ಮವು 10000 ವರ್ಷಗಳ ಸಂಶೋಧನೆಯ ಪ್ರತಿಫಲ. ಇಂಥ ಪವಿತ್ರವಾದ ಧರ್ಮದಲ್ಲಿ ಹುಟ್ಟಿದ ನಾವು ಬಸವಣ್ಣ ಹೇಳಿದಂತೆ ಕುಲವೇ ಬೇರೆ, ಧರ್ಮವೇ ಬೇರೆ ಅನ್ನೋದನ್ನು ತಿಳಿದುಕೊಳ್ಳಬೇಕು. ಕುಲ, ಧರ್ಮ ಎರಡೂ ಒಂದೇ ಎಂದರೆ ದೇಶ ಹಾಳಾಗುತ್ತದೆ ಎಂದರು.
ಯಾವ ಹಿಂದು ಕೂಡ ತನ್ನ ಒಡಹುಟ್ಟಿದ ತಂಗಿಯನ್ನ ಮದುವೆ ಮಾಡಿಕೊಳ್ಳಲ್ಲ. ಇದು ನಮ್ಮ ಧರ್ಮದ ಪ್ರಭಾವ. ಯಾವ ಪಕ್ಷದಲ್ಲೇ ಇರಿ, ಯಾರಿಗೇ ಓಟ್ ಹಾಕಿ, ಅದರೆ ಹಿಂದು ಅಲ್ಲ ಮಾತ್ರ ಎನ್ನಬೇಡಿ. ಹಾಗೆಂದರೆ ದೇಶ ಹಾಳಾಗುತ್ತದೆ. ಹಿಂದು ಧರ್ಮ ಉಳಿದರೆ ಬೇರೆ ದರ್ಮ ಉಳಿಯುತ್ತವೆ ಎಂದರು.
ಚೀನಾದವರು ಭಾರತದ ಕಡೆ ನಿಂತು ನಮಸ್ಕರಿಸಿ ಮುಂದಿನ ಜನ್ಮದಲ್ಲಿ ಭಾರತದಲ್ಲಿ ಹುಟ್ಟಿಸು ಅಂತಾರೆ. ಇಡೀ ಜಗತ್ತನ್ನೇ ಕೊಳ್ಳುವಷ್ಟು ಶ್ರೀಮಂತಿಕೆ ಭಾರತದಲ್ಲಿದೆ ಎನ್ನುವುದನ್ನು 10 ವರ್ಷಗಳ ಹಿಂದೆ ಆಗಿನ ಹಣಕಾಸು ಮಂತ್ರಿಯೇ ಹೇಳಿದ್ದರು. ಎಲ್ಲ ಅವಿಷ್ಕಾರ ಕೊಟ್ಟದ್ದು ಭಾರತೀಯರೆ. ಉದಯಿಸುವ ಸೂರ್ಯನ ಬಣ್ಣವೂ, ಒಲೆಯ ಕೆಂಡವೂ ಕೇಸರಿಯೇ. ಇಂದಿನ ಪ್ರಧಾನಿ ದಿನಕ್ಕೊಂದು ಬಟ್ಟೆ ಬದಲಿಸ್ತಾರೆ ಎಂದು ದೂರುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಒಂದೇ ಬಣ್ಣದ ಬಟ್ಟೆ ತೊಡುವವರು ದೇಶ ಆಳುತ್ತಾರೆ. ಮಕ್ಕಳನ್ನು ಹೆರುವ ತಾಕತ್ತಿಲ್ಲದವರು ಮತಾಂತರ ಮಾಡುತ್ತಿದ್ದಾರೆ. ಪ್ರತಿಯೊಬ್ಬರು ಗಿಡ ನೆಡಬೇಕು. ಸ್ವದೇಶಿ ವಸ್ತು ಬಳಸಬೇಕು ಎಂದರು.
ಮಹಿಳಾ ಪ್ರತಿನಿಧಿಯಾಗಿದ್ದ ಜಯಶ್ರೀ ಸಾಲಿಮಠ, ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನ ಸಂಚಾಲನಾ ಸಮಿತಿ ಅಧ್ಯಕ್ಷ ಬಸವರಾಜ ನಾವದಗಿ, ದಿವ್ಯಸಾನಿಧ್ಯ ವಹಿಸಿದ್ದ ಶ್ರೀ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಮಾತನಾಡಿದರು.
ಗುರುಲಿಂಗ ಶಿವಾಚಾರ್ಯರು, ಅಭಿನವ ರುದ್ರಮುನಿ ಶಿವಾಚಾರ್ಯರು, ಮಲ್ಲಿಕಾರ್ಜುನ ಶಿವಾಚಾರ್ಯರು, ಘನಮರೇಶ್ವರ ಮಹಾಸ್ವಾಮಿಗಳು, ಅಮರೇಶ್ವರ ದೇವರು, ಬಸವಪ್ರಭು ಸ್ವಾಮಿಗಳು, ಗುರುಮೂರ್ತಿ ದೇವರು, ಆಯ್. ಬಿ. ಹಿರೇಮಠ ಸ್ವಾಮಿಗಳು, ಸೋಮಶೇಖರಯ್ಯ ಸ್ವಾಮಿಗಳು, ಮಲ್ಲಿಕಾರ್ಜಜನ ಗುರುವಿನ್ ಸೇರಿ ವಿವಿಧ ಸ್ವಾಮೀಜಿಗಳು, ಶರಣೆಯರು ಸಾನಿಧ್ಯ ವಹಿಸಿದ್ದರು.
ವಿವಿಧ ಸಮಾಜಗಳ ಅಧ್ಯಕ್ಷರಾದ ಪ್ರಭುರಾಜ ಕಲಬುರ್ಗಿ, ದಾನಯ್ಯ ಹಿರೇಮಠ, ಮಲ್ಲಿಕಾರ್ಜುನ ಮದರಿ, ಅಮರೇಶ ಗೂಳಿ, ಅಶೋಕ ಚಟ್ಟೇರ, ಎಂ.ಜಿ.ಬಿರಾದಾರ, ಶರಣು ಸಜ್ಜನ, ಸುರೇಶಗೌಡ ಪಾಟೀಲ, ಸಂಗಣ್ಣ ಕುಂಬಾರ, ನೇತಾಜಿ ನಲವಡೆ, ಪ್ರಭು ಪವಾರ, ಬಹಾದ್ದೂರ ರಾಠೋಡ, ರಾಮಣ್ಣ ಗೊಲ್ಲರ, ರವಿಚಂದ್ರ ವಡ್ಡರ, ಶಿವಶಂಕರ ದೊಡಮನಿ, ನಾರಾಯಣ ದುರ್ವೆ, ಮಲ್ಲಣ್ಣ ಪತ್ತಾರ, ನಾಗೇಶ ಭಜಂತ್ರಿ, ರೇವಣೆಪ್ಪ ಹರಿಜನ, ಶಂಕ್ರಪ್ಪ ಹಡಪದ, ನಿಂಗಣ್ಣ ಕಟ್ಟಿಮನಿ, ರವಿ ತೇಲಂಗಿ, ಸುನೀಲ ಇಲ್ಲೂರ, ಬಾಹುಬಲಿ ಗೋಗಿ, ಪವಾಡಪ್ಪ ಮಡಿವಾಳರ, ಅಪ್ಪಣ್ಣ ಸಿದ್ದಾಪೂರ, ಗಣೇಶ ಅನ್ನಗೌನಿ, ಸುರೇಶ ಕಲಾಲ, ನಾಗೇಶ ಲಾತೂರಕರ, ಮಹಾಂತೇಶ ಪಟ್ಟಣದ, ನಾಗಪ್ಪ ಸುಡಗಾಡಸಿದ್ದ, ಸುಜಾರಾಮ ಪಟೇಲ, ಮಹಾಬಳೇಶ ಉಪನಾಳ, ಚನ್ನಬಸು ಗುಡ್ಡದ, ಗುಲಾಬಚಂದ ಓಸ್ವಾಲ, ಭಗವಂತ ಕಬಾಡೆ, ಬಸವರಾಜ ಬೈಲಪತ್ತಾರ, ಸಂಗಮೇಶ ಕುಲಕರ್ಣಿ, ಭೀಮಣ್ಣ ದಾಸರ, ಎಂ.ಎಸ್.ಬಿರಾದಾರ, ರಾವಸಾಹೇಬ ದೇಸಾಯಿ, ಮಯೂರಸಿಂಗ್ ರಾಯಚೂರ, ಸದಾನಂದ ಬುಡ್ಡರ, ರವಿ ನಂದೆಪ್ಪನವರ, ಲಕ್ಷ್ಮಣ ಹರಣಸಿಕಾರಿ, ಸಮಿತಿ ಪ್ರಧಾನಕಾರ್ಯದರ್ಶಿ ಶ್ರೀಕಾಂತ ಹಿರೇಮಠ, ಖಜಾಂಚಿ ಸುಭಾಷ ಕುಲಕರ್ಣಿ ಸೇರಿ ಹಲವರು ವೇದಿಕೆಯಲ್ಲಿದ್ದರು.
ಸಂಗಮ್ಮ ದೇವರಳ್ಳಿ, ಸೀಮಾ ದಂಡಾವತಿ, ಸಹನಾ ಬಡಿಗೇರ ಪ್ರಾರ್ಥಿಸಿದರು. ಪರಶುರಾಮ ಪವಾರ ದೇಶಭಕ್ತಿ ಗೀತೆ ಹಾಡಿದರು. ವೆಂಕನಗೌಡ ಪಾಟೀಲ ಸ್ವಾಗತಿಸಿದರು. ಟಿ.ಡಿ.ಲಮಾಣಿ ನಿರೂಪಿಸಿದರು. ಅಶೋಕ ಮಣಿ ವಂದಿಸಿದರು.
ಬಾಕ್ಸ್:
ಕಾರ್ಯಕ್ರಮದಲ್ಲಿ ಮಳಲಿಯವರು ಮಾತನಾಡುತ್ತಿದ್ದಾಗ ಜಿಟಿಜಿಟಿ ಮಳೆ ಶುರುವಾಯಿತು. ಜನರು ಹೊರಡಲು ಪ್ರಾರಂಭಿಸಿದರು. ಆಗ ಮಳಲಿಯವರು 135 ವರ್ಷದ ನಂತರ ಜನೇವರಿಯಲ್ಲಿ ಮಳೆ ಬರ್ತಿದೆ. ಇದು ಶುಭದ ಸಂಕೇತ. ಮುದ್ದೇಬಿಹಾಳ ಇತಿಹಾಸದಲ್ಲಿ ಬರೆದಿಡುವಂಥ ವಾತಾವರಣ ಮೂಡಿದೆ. ಇಲ್ಲಿಂದ ಹೋಗುವಾಗ ನಾನು ದೇಶಕ್ಕ ಏನು ಮಾಡಿದ್ದೇನೆ, ಏನು ಮಾಡಬೇಕು ಅನ್ನೋ ಸಂಕಲ್ಪ ತೊಡಬೇಕು ಎಂದದ್ದು ಜನರ ಮನಸ್ಸನ್ನು ಬದಲಾಯಿಸಿತು.
ನಿದ್ದೆಯಲ್ಲಿರುವ ಹಿಂದುವನ್ನು ಬಡಿದೆಬ್ಬಿಸುವ ಇಂಥ ಕಾರ್ಯಕ್ರಮಗಳು ಹೆಚ್ಚು ಪ್ರಸ್ತುತ. ಅರ್ಧಂಬರ್ಧ ತಿಳಕೊಂಡವರಿಂದಲೇ ದೇಶ ಹಾಳಾಗುತ್ತಿದೆ. ಅಚರಣೆಗಳು ಶುದ್ದವಾಗಿರುವ ಧರ್ಮವೆ ನಿಜವಾದ ಧರ್ಮ. ಯುಗಾದಿ ನಮಗೆಲ್ಲರಿಗೂ ಹೊಸ ವರ್ಷ ಆಗಬೇಕು.
-ಸಿದ್ಧಲಿಂಗ ದೇವರು, ಖಾಸ್ಗತೇಶ್ವರಮಠ, ತಾಳಿಕೋಟೆ-ಮುದ್ದೇಬಿಹಾಳ.
–


















