ಇಂಡಿ : ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವ ವಿಚಾರದಲ್ಲಿ ಉಂಟಾಗಿರುವ ವಿವಾದದ ಮಧ್ಯಯೇ ಇಂದು ಮತ್ತೇ ಹಿಜಾಬ್, ಕೇಸರಿ ಶಾಲು, ನೀಲಿ ಶಾಲು ಧರಿಸಿಕೊಂಡು ಕಾಲೇಜಿಗೆ ಬಂದ ವಿಧ್ಯಾರ್ಥಿಗಳು ಬಂದಿದ್ದಾರೆ.
ಹೌದು ಇಂಡಿ ಪಟ್ಟಣದ ಶಾಂತೇಶ್ವರ ಪಿಯು ಕಾಲೇಜಿನ ವಿಧ್ಯಾರ್ಥಿಗಳು ಇಂದು ಮತ್ತೆ ಹಿಜಾಬ್ ಧರಿಸಿಕೊಂಡು ಆಗಮಿಸಿದರು.ಇದನ್ನ ಗಮನಿಸಿದ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ತಡೆದು, ಸರಕಾರದ ನಿಯಮದಂತೆ ಸಮವಸ್ತ್ರ ಧರಿಸಿಕೊಂಡು ಆಗಮಿಸಿದ್ರೆ ಮಾತ್ರ ಅವಕಾಶ ಅಂತಾ ಹೇಳಿ ಮನವೋಲಿಸಿ ಕಳಿಸಿದರು. ಆದರೆ ಹಿಜಾಬ್ ಧರಿಸಿದ್ದನ್ನ ಕಂಡ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಆಗಮಿಸಿದ್ರೆ, ಅದಕ್ಕೆ ಪರೋಕ್ಷವಾಗಿ ಕೆಲ ವಿಧ್ಯಾರ್ಥಿಗಳು ನೀಲಿ ಶಾಲು ಧರಿಸಿ ಆಗಮಿಸಿದರು. ಇನ್ನೂ ಸರಕಾರ ಸೂಚಿಸಿದಂತೆ ಸಮವಸ್ತ್ರ ಧರಿಸಿಕೊಂಡು ಆಗಮಿಸಿದ ವಿಧ್ಯಾರ್ಥಿಗಳಿಗೆ ಮಾತ್ರ ತರಗತಿಗೆ ಅವಕಾಶ ಕೊಟ್ಟರು. ಆದರೆ ಕೇಸರಿ ಶಾಲು ಧರಿಸಿದ ಪಂಗಡ ಸಿಂದಗಿ ರಸ್ತೆಗೆ ಗುಂಪು ಮಾಡಿಕೊಂಡು ನಿಂತರೆ, ನೀಲಿಪಡೆ ಬಸ್ ನಿಲ್ದಾಣದ ಕಡೆ ಗುಂಪು ಮಾಡಿಕೊಂಡು ನಿಂತ್ತಿದ್ದು ನೋಡುಗರಿಗೆ ಬಿಸಿ ವಾತಾವರಣದಂತೆ ಕಾಣತಿತ್ತು. ಸಧ್ಯ ಸ್ಥಳದಲ್ಲಿ ಪೋಲಿಸ್ ಬಿಗಿ ಬಂದು ಬಸ್ತು ಕೈಗೊಳ್ಳಲಾಗಿದೆ.