ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ ಶಾಸಕ ಎಂ ಆರ್ ಮಂಜುನಾಥ್..
ಹನೂರು: ಪಟ್ಟಣದ ಶ್ರೀ ಮಲೆ ಮಹದೇಶ್ವರ ಕ್ರೀಡಾoಗಣದಲ್ಲಿ ಹನೂರು ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.ಶಾಸಕ ಎಂಆರ್ ಮಂಜುನಾಥ್ ರವರು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಜ್ಯೋತಿ ಬೆಳಗಿಸಿ ಗುಂಡು ಎಸೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ನಂತರ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು.
ಹನೂರು ಶೈಕ್ಷಣಿಕ ವಲಯದಲ್ಲಿ ಗ್ರಾಮೀಣ ಭಾಗದ ಮಕ್ಕಳು ಪಠ್ಯ ಚಟುವಟಿಕೆಯಲ್ಲಿ ಮಾತ್ರವಲ್ಲದೆ ಕ್ರೀಡೆಗಳಲ್ಲೂ ಸಹ ಮುಂದೆ ಇರುವುದು ಈಗಾಗಲೇ ರುಜುವಾತಾಗಿದೆ.ಈಗಲೂ ಸಹ ಹನೂರು ಶೈಕ್ಷಣಿಕ ವಲಯದಿಂದ ರಾಜ್ಯ ಮಟ್ಟಕ್ಕೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಹನೂರು ತಾಲೂಕಿಗೆ ಕೀರ್ತಿ ತರಬೇಕು. ವಿದ್ಯಾರ್ಥಿಗಳು ಈ ಸಾಲಿನಲ್ಲಿ ವಿಶೇಷ ಮೆರುಗನ್ನು ಕೊಟ್ಟಿದ್ದಾರೆ. ಮೈಸೂರು ವಿಭಾಗಕ್ಕೆ ಇದು ಒಂದು ದೊಡ್ಡ ಕಾರ್ಯಕ್ರಮ ಎಂಬುದು ನಮ್ಮ ಹೆಮ್ಮೆಯಾಗಿದೆ. ವಿದ್ಯಾರ್ಥಿಗಳಿಂದ ಪ್ರತಿಭೆಯನ್ನು ದೈಹಿಕ ಶಿಕ್ಷಕರು ಗುರುತಿಸಿ ಅವರನ್ನು ರಾಜ್ಯ ರಾಷ್ಟ್ರಮಟ್ಟಕ್ಕೆ ಕಳುಹಿಸಲು ಪ್ರೋತ್ಸಾಹವನ್ನು ನೀಡಬೇಕು ಹಾಗೂ ಅವರಿಗೆ ಬೇಕಾದಂತಹ ತರಬೇತಿಯನ್ನು ನೀಡಬೇಕು. ದೈಹಿಕ ಶಿಕ್ಷಕರು ಮಕ್ಕಳಗಳನ್ನು ಗುರುತಿಸಿ ಅವರ ಹೆಸರುಗಳನ್ನು ಪಟ್ಟಿ ಮಾಡಿ ನಿಮ್ಮ ಜೊತೆ ನಾನು ಇದ್ದು ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತೇನೆ .ನಾನು ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ಅಥ್ಲೆಟಿಕ್ಸ್ ಗಳಲ್ಲಿ ಗುಂಡು ಎಸೆತ, ಜಾವೆಲಿನ್ ಥ್ರೋ ಬಹುಮಾನವನ್ನು ಗೆದ್ದ ಸಂದರ್ಭ ನೆನಪಾಯಿತು ಎಂದು ವಿವರಿಸಿದ್ದರು.
ಈ ಸಮಯದಲ್ಲಿ ದೈಹಿಕ ಶಿಕ್ಷಕರಾದಂತಹ ಜೋಸೆಫ್ ರವರಿಗೆ ಎಂ ಆರ್ ಮಂಜುನಾಥ್ ರವರು ಸನ್ಮಾನವನ್ನು ಮಾಡಿದರು ಹಾಗೂ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಕನಕಪುರದ ಸತೀಶ್ ರವರಿಗೂ ಶಾಸಕರು ಸನ್ಮಾನಿಸಿದರು.
ಗಮನ ಸೆಳೆದ ಪಥ ಸಂಚಲನ : ಪಟ್ಟಣದ ವಿವಿಧ ಶಾಲೆಗಳ ಮಕ್ಕಳು ಪಥ ಸಂಚಲನ ಮಾಡಿ ಬಹಳ ಗಂಭೀರವಾಗಿ ಬ್ಯಾoಡ್ ಶೆಟ್ ಗೆ ಸರಿಯಾಗಿ ಪಥಸಂಚಲನ ಮಾಡಿದರು.. ನೋಡುಗರಿಗೆ ರೋಮಾಂಚನಕಾರಿಯಾಗಿತ್ತು. ಹಾಗೂ ಏರೋಬಿಕ್ಸ್ ನೋಡುಗರ ಕಣ್ಮನ ಸೆಳೆಯುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು ಸುಮಾರು 1250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಏರೋಬಿಕ್ಸ್ ನಲ್ಲಿ ಪಾಲ್ಗೊಂಡಿದ್ದರು. ಸುಲೋಚನ ಜಿ ವಿ ಗೌಡ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯ ನೇತೃತ್ವದಲ್ಲಿ ನಡೆಯಿತು.
ಇದೆ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು, ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ್,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಗಿರೀಶ್, ಚಾಮರಾಜನಗರ ಸರ್ಕಾರಿ ನೌಕರರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ವಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಶೋಕ್, ಹನೂರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಗುರುಸ್ವಾಮಿ, ವಿವೇಕಾನಂದ ಶಾಲೆಯ ಮುಖ್ಯ ಶಿಕ್ಷಕರಾದ ಮಧುಸೂದನ್, ಪಟ್ಟಣ ಪಂಚಾಯಿತಿ ಸದಸ್ಯರಾದ ಆನಂದ್,ಪವಿತ್ರ , ಹನೂರು ತಾಲ್ಲೂಕು ದೈಹಿಕ ಪರಿವೀಕ್ಷರಾದ ಮಹದೇವ ,ವಿವಿಧ ಶಾಲೆಯ ಶಿಕ್ಷಕರುಗಳು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ವರದಿ : ಚೇತನ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ