ತಾಂಬಾ ಹೆಸ್ಕಾಂ ಅಧಿಕಾರಿ ವಿರುದ್ಧ ಪ್ರತಿಭಟನೆ
ಇಂಡಿ : ತಾಲೂಕಿನ ತಾಂಬಾ ಗ್ರಾಮದ ಹೆಸ್ಕಾಂ ಅಧಿಕಾರಿ
ಸಧ್ಯ ಟಿಸಿ ಗೆ ಕನೆಕ್ಸನ ಇದ್ದರೂ ಮತ್ತೆ ಹೆಚ್ಚಿಗೆ
ಕನೆಕ್ಸನ್ ನೀಡಿ ಒಂದೂ ಮೋಟಾರ ನಡೆಯದಂತೆ
ಮಾಡುತ್ತಿದ್ದಾರೆ ಎಂದು ಒತ್ತಾಯಿಸಿ ಪಟ್ಟಣದ ಮಿನಿ
ವಿಧಾನಸೌಧದಲ್ಲಿ ಕರವೇ ಕಾರ್ಯಕರ್ತರು ಮತ್ತು ತಾಂಬಾ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಅಲ್ಲಾಬಕ್ಷ ದಡೇದ ಗೊರೆ ಮಾತನಾಡಿ 10 ವರ್ಷಗಳ ಹಿಂದೆ ನಾಲ್ಕು ಜನ ರೈತರಿಗೆ ಟ್ರಾನ್ಸಫಾರ್ಮರ ನೀಡಿದ್ದು ಈಗ ಆ ಟಿಸಿ ಗೆ ಮತ್ತೆ ಹೆಚ್ಚಿನ ಕನೆಕ್ಸನ ನೀಡಿ ಲೋಡ್ ಹೆಚ್ಚಾಗುತ್ತಿದ್ದು ಒಂದು ಮೋಟಾರು ನಡೆಯದಂತೆ
ಮಾಡುತ್ತಿದ್ದಾರೆ. ಹೀಗಾಗಿ ಮೇಲಾಧಿಕಾರಿಗಳು
ಕ್ರಮ ಜರುಹಿಸುವ ಕುರಿತು ಆಗ್ರಹಿಸಿದರು. ಅದಲ್ಲದೆ ಈ ರೀತಿ ನಮ್ಮ ಒಂದೆ ಟಿಸಿ ಅಲ್ಲದೆ ಇತರೆ ಟಿಸಿಗಳಿಗೂ ಕಿರುಕಳ ನೀಡುತ್ತಿದ್ದಾರೆ ಎಂದು ಆರೊಪಿಸಿದರು.
ಪ್ರತಿಭಟನೆಯಲ್ಲಿ ಅಬ್ದುಲ್ ದಡೇದ, ಮುದಕಪ್ಪ ಕಲ್ಲೂರ,
ಹುಚ್ಚಪ್ಪ ಕಾಂಬಳೆ, ಮಾಸೀಮ ಮಂಗಳಖೇಡ, ಸಿದ್ದು ಶಿರಶ್ಯಾಡ, ಮಹಮ್ಮದಸಾಬ ವಾಲಿಕಾರ, ಪರಸು ಬಿಸನಾಳ, ರಿಯಾಜ ಮಂಗಳವೇಡ, ಹಾಜಿ ಗೌಂಡಿ,
ಸಿದ್ದಪ್ಪ ಹಿರೇಕುರಬರ, ಇಸಾಕ ಮೋಮೀನ, ಪುಟ್ಟು ಅಳೋಳೀ, ಬೀಜರಿ ಮತ್ತಣ್ಣ, ನಾಗು ಪೂಜಾರಿ ಮತ್ತಿತರಿದ್ದರು.ಶಿರಸ್ತೆದಾರ ಎಸ್.ಆರ್.ಮುಜಗೊಂಡ ಇವರಿಗೆ ಮನವಿ ಅರ್ಪಿಸಿದರು. ಇದಕ್ಕೂ ಪೂರ್ವ ಹೆಸ್ಕಾಂ ಕಚೇರಿ ತೆರಳಿ ಅಲ್ಲಿಯೂ ಮನವಿ ಸಲ್ಲಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕರವೇ ಕಾರ್ಯಕರ್ತರು ಮತ್ತು ತಾಂಬಾ ಮತ್ತು
ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ
ನಡೆಸಿದರು.