ಆರೋಗ್ಯ, ಶಿಕ್ಷಣಕ್ಕೆ ಅತ್ಯುತ್ತಮ ಬಜೆಟ್ : ಪ್ರವೀಣ ಮನಮಿ
ಇಂಡಿ : ಇಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು 15ನೇ ಬಜೆಟ್ ಮಂಡಿಸಿದ್ದು, ಅದರಲ್ಲಿ ಶಿಕ್ಷಣಕ್ಕೆ, ಆರೋಗ್ಯಕ್ಕೆ ಅತೀ ಹೆಚ್ಚು ಒತ್ತು ನೀಡಿದ್ದಾರೆ. ಅದಲ್ಲದೇ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಹಾಗೂ ಜಿಲ್ಲೆಯ ಆಲಮೇಲ ತಾಲ್ಲೂಕಿನಲ್ಲಿ ತೋಟಗಾರಿಕೆ ಕಾಲೇಜು ಇನ್ನಿತರ ವಿಚಾರದಲ್ಲಿ ವಿಶೇಷ ಯೋಜನೆಗಳು ರೂಪಿಸಿದ್ದು ಸಂತಸ ತಂದಿದ್ದು, ಇದೊಂದು ಅತ್ಯುತ್ತಮ ಬಜೆಟ್ ಯಾಗಿದೆ.



















