ಇಂಡಿ : ಇತ್ತೀಚೆಗೆ ಇಂಡಿ ಪಟ್ಟಣದ ಅಪಘಾತದಲ್ಲಿ ರೂಡಗಿ ಗ್ರಾಮದ ಹುಚ್ಚಪ್ಪ ಹಾದಿಮನಿ ಎನ್ನುವವರು ಮೃತಪಟ್ಟಿದ್ದರು. ಮೃತ ಹುಚ್ಚಪ್ಪನ ಕುಟುಂಬಸ್ಥರಿಗೆ
ಭೀಮಾಶಂಕರ ಸೌಹಾರ್ದ ಸಹಕಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು 50 ಸಾವಿರ ರೂಪಾಯಿ ನಗದು ನೀಡಿದರು. ಇತ್ತೀಚಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಮೃತರ ಮನೆಗೆ ಭೇಟಿ ನೀಡಿ ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಗದು ನೀಡುವುದಾಗಿ ಘೋಷಿಸಿದ್ದರು. ಇಂದು ಭೀಮಾಶಂಕರ ಸೌಹಾರ್ದ ಸಹಕಾರಿಯಲ್ಲಿ ಮೃತನ ಹೆಂಡತಿ ಸಾವಿತ್ರಿಬಾಯಿ ಹಾದಿಮನಿ ಅವರಿಗೆ ನಗದು ನೀಡಲಾಯಿತು.
ಈ ವೇಳೆ ಮಂಜುನಾಥ ಕಾಮಗೊಂಡ, ಸತೀಶ ಕುಂಬಾರ, ಹುಚ್ಚಪ್ಪ ತಳವಾರ, ಸುನೀಲ ಕೋಳಿ, ಸಾಯಬಣ್ಣ ಬಂಕಲಗಿ, ಶಿವಲಿಂಗ ತಲಾರಿ, ಶಿವಾನಂದ ವಾಲೀಕಾರ,
ಸಿದ್ದಪ್ಪ ಹಾದಿಮನಿ ಮತ್ತಿತರರು ಉಪಸ್ಥಿತರಿದ್ದರು.