ಆರೋಗ್ಯ ಸೇವೆಗಳು ಜನರ ಮನೆ ಬಾಗಲಿಗೆ – ಯಶವಂತರಾಯಗೌಡ
ಇಂಡಿ : ವಿವಿಧ ಆರೋಗ್ಯ ಸೇವೆಗಳು ಇಂದು ಜನರ ಮನೆ ಬಾಗಲಿಗೆ ಬರುತ್ತಿರುವದು ಸಂತೋಷದ ಸಂಗತಿ, ಕ್ಷೇತ್ರದ ಜನತೆ ಆರೋಗ್ಯ ಇಲಾಖೆಯ ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಯುನಾನಿ ಘಟಕ ಪ್ರಾರಂಭೋತ್ಸವ ಮತ್ತು ಇಂಡಿ ತಾಲೂಕಾ ಆರೋಗ್ಯ ಸೇವೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ಕೆಲ ಚಿಕಿತ್ಸೆ ಸೌಲಭ್ಯಗಳಿಗಾಗಿ ಮಹಾರಾಷ್ಟçದ ಸೋಲಾಪುರ, ಸಾಂಗಲಿ,ಮಿರಜ ಇಲ್ಲವೆ ಜಿಲ್ಲಾ ಕೇಂದ್ರ ವಿಜಯಪುರಕ್ಕೆ ಹೋಗಬೇಕಾಗುತ್ತಿತ್ತು.ಮತ್ತು ಸಾಕಷ್ಟು ಹಣ ಕೂಡ ಖರ್ಚಾಗುತ್ತಿತ್ತು. ಆದರೆ ಈಗ ನಮ್ಮ ಕ್ಷೇತ್ರದಲ್ಲಿ ಎಲ್ಲ ಸೌಲಭ್ಯಗಳು ಸಿಗುತ್ತಿವೆ ಎಂದರು.
ಪ್ರತಿಯೊಬ್ಬರ ಜೀವನದಲ್ಲಿ ಆರೋಗ್ಯವೇ ಭಾಗ್ಯ. ಕಾರಣ ನಮ್ಮ ಜೀವನ ಸುಗಮವಾಗಿ ನಡೆಯಬೇಕಾದರೆ ಆರೋಗ್ಯ ಸರಿಯಾಗಿಇರಬೇಕು. ಹೀಗಾಗಿ ಎಲ್ಲರೂ ಆರೋಗ್ಯ ರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಆರೋಗ್ಯವನ್ನು ಕಾಪಾಡಿಕೋಳ್ಳಬೇಕು ಕ್ಷೇತ್ರದ ಜನತೆಯ ಆರೋಗ್ಯ ಚೆನ್ನಾಗಿರಬೇಕು ಎಂದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ|| ಸಂಪತಕುಮಾರ ಗುಣಾರಿ ಮಾತನಾಡಿ ಆರೋಗ್ಯ ಸೇವೆ ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಗಗನ ಕುಸುಮವಾಗಿದೆ. ಈಗ ಸರಕಾರಿ ಆಸ್ಪತ್ರೆಗಳಲ್ಲಿ ಅನೇಕ ಸೌಲಭ್ಯಗಳಿವೆ. ಆಯುಷ್ಮಾನ ಭಾರತ ಆರೋಗ್ಯ ಕಾರ್ಯಕ್ರಮದಲ್ಲಿ ಬಡ ಜನರಿಗೆ ಐದು ಲಕ್ಷದ ವರೆಗೆ ಉಚಿತ ಚಿಕಿತ್ಸೆ ಸಿಗುತ್ತದೆ ಎಂದರು.
ಗೃಹ ಆರೋಗ್ಯ ಕಾರ್ಯಕ್ರಮದಲ್ಲಿ ಸಾಂಕ್ರಾಮಿಕ ರೋಗಗಳಿಂದ ಬಳಲುವ ರೋಗಿಗಳಿಗೆ ಮನೆ ಮನೆಗೆ ಹೋಗಿ ಪರೀಕ್ಷೆ ಮತ್ತು ಔಷಧ ಯೋಜನೆಯನ್ನು ಸರಕಾರ ಪ್ರಾರಂಭಿಸಿದೆ. ಸಾರ್ವಜನಿಕರು ಸಹಕರಿಸಿದರೆ ಇನ್ನೂ ಹೆಚ್ಚಿನ ಸೇವೆ ನೀಡುತ್ತೇವೆ ಎಂದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ||ಆರ್.ಎಸ್.ಇಂಗಳೆ ಮಾತನಾಡಿ ಪ್ರಯೋಗಾಲಯ, ರಕ್ತ ಸೇಖರಣಾ ಘಟಕ,ಅತ್ಯಾಧುನಿಕ ಯಂತ್ರಗಳ ಚಾಲನೆ,ಡಿಜಿಟಲ್ ಎಕ್ಸ ರೇ ಯಂತ್ರ,ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕ ಸೇರಿದಂತೆ ಅನೇಕ ಸೌಲಭ್ಯ ಆಸ್ಪತ್ರೆ ಹೊಂದಿದ್ದು ಸಾರ್ವಜನಿಕ ಆಸ್ಪತ್ರೆಯ ಸದುಪಯೋಗ ಪಡೆಯಲು ಕೇಳಿಕೊಂಡರು.ಟಿಎಚ್‌ಓ ಡಾ|| ಕೃಷ್ಣಕುಮಾರ ಜಾಧವ, ಶಿವಾಜಿ ಮಾನೆ ಮಾತನಾಡಿದರು.
ವೇದಿಕೆಯ ಮೇಲೆ ಆರೋಗ್ಯ ಇಲಾಖೆಯ ನಾಮ ನಿರ್ದೇಶಿತ ಸದಸ್ಯರಾದ ರಾಜು ಪತಂಗೆ, ಸತೀಶ ಕುಂಬಾರ, ಡಾ. ರಾಜಶೇಖರ ತೋಳನೂರ, ಸುದೀರ ಕರಕಟ್ಟಿ, ಪ್ರಭು ನಾಡಗೌಡ, ಜಹಾಂಗೀರ ಸೌದಾಗರ ಮತ್ತಿತರಿದ್ದರು.
ಸಮಾರಂಭದಲ್ಲಿ ಡಾ|| ರಾಜೇಶ ಕೋಳೆಕರ, ಡಾ|| ರವಿ ಭತಗುಣಕಿ, ಜಗದೀಶ ಬಿರಾದಾರ, ಪ್ರಸನ್ನ ಗಜಾಕೋಶ, ಶೃತಿ ಕುಂಬಾರ, ಡಾ|| ಅನೀಲ ರಾಠೋಡ, ಸತೀಶ ಪಾಟೀಲ, ಪ್ರಶಾಂತ ಧೂಮಗೊಂಡ, ಡಾ|| ವಿಪುಲ್ ಕೋಳೆಕರ ಮತ್ತಿತರಿದ್ದರು.
ಇಂಡಿ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಯುನಾನಿ ಘಟಕ ಪ್ರಾರಂಭೋತ್ಸವ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿದರು.