ರಾಮಾಪುರ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ
ಹನೂರು: ತಾಲೂಕಿನ ರಾಮಾಪುರ ಗ್ರಾಮದ ಮಹದೇಶ್ವರ ದೇವಾಲಯದ ಆವರಣದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕೂರ್ ಸಂಪರ್ಕ ಕಾರ್ಯಕರ್ತರ ಯೋಜನೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕರ್ನಾಟಕ ಸ್ಟೇಟ್ ಗೇಟ್ಸ್ಪ್ರ ಪ್ರಿ ವೆಂಶನ್ ಸೊಸೈಟಿ ರಾಮಾಪುರ ಗ್ರಾಮ ಪಂಚಾಯಿತಿ, ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಗ್ರಾಮ ಆರೋಗ್ಯ ಕಾರ್ಯಕ್ರಮ ಯೋಜನೆಯ ಸಹಯೋಗದೊಂದಿಗೆ ರಾಮಾಪುರ ಗ್ರಾಮದಲ್ಲಿ ವಿಶೇಷ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಹಾಗೂ ಮುಖ್ಯ ಅತಿಥಿಗಳಾಗಿ ರಾಮಾಪುರ ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿ ಮನುರವರು ವಹಿಸಿಕೊಂಡಿದ್ದರು. ಈ ಕಾರ್ಯಕ್ರಮ ಉದ್ದೇಶಿಸಿ ವೈದ್ಯಾಧಿಕಾರಿ ಮನು ರವರು ಮಾತನಾಡಿ ವಲಸಿಗರು ಲಾರಿ ಆಟೋ ಬಸ್ ಚಾಲಕರು ಈ ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಮುಖಂಡರು ಶಿವಣ್ಣ ಹಾಗೂ ಶಿವಪ್ಪ ಆಪ್ತ ಸಮಾಲೋಚಕರು ನಟೇಶ್ ತಂತ್ರಜ್ಞರು ಡಯಾನ ಗ್ರಾಮ ಆರೋಗ್ಯ ಕಾರ್ಯಕ್ರಮದ ತಾಲೂಕು ಸಂಯೋಜಕರು ಸಂತೋಷ್, ರವರು ಪಿಎಚ್ಒ ಪ್ರಿಯಾಂಕ ಮತ್ತು ಮಂಜುನಾಥ್ ಸಂಪರ್ಕ ಕಾರ್ಯಕರ್ತರ ಸಿಬ್ಬಂದಿ ರತಿಕಲ ಇನ್ನು ಮುಂತಾದವರು ಉಪಸ್ಥಿತರಿದ್ದರು.
ವರದಿ: ಚೇತನ್ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ.