ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಶಾಲೆಗೆ ಚಕ್ಕರ್..! ರಾಜಕಾರಣದಲ್ಲಿ ಆ್ಯಕ್ಟೀವ್:
ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಿಲ್ಲ..!
ಇಂಡಿ : ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಶಾಲೆಗೆ ಸರಿಯಾಗಿ ಬರುತ್ತಿಲ್ಲ ಎಂದು ತರಗತಿ ಬಹಿಷ್ಕರಿಸಿ ಶಾಲಾ ಆವರಣದಲ್ಲಿಯೇ ವಿಧ್ಯಾರ್ಥಿಗಳು ಹಾಗೂ ಪಾಲಕರು ಮುಖ್ಯ ಶಿಕ್ಷಕರ ಅಮಾನತ್ತಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ತಾಲ್ಲೂಕಿನ ನಿಂಬಾಳ ಗ್ರಾಮದ ಹೊಸೂರ ಹಟ್ಟಿಯ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೇಣು ಚವ್ಹಾಣ ಸರಿಯಾಗಿ ಶಾಲೆಗೆ ಬರುತ್ತಿಲ್ಲ. ಸುಮಾರು 8 ವರ್ಷಗಳಿಂದ ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಶಾಲೆಗೆ ಬರೋದು ಅಪರೂಪ. ಈ ಬಗ್ಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೆವೆ. ಆದರೂ ಬದಲಾವಣೆ ಮಾಡದೆಯಿರುವುದರಿಂದ ನಮ್ಮ ಮಕ್ಕಳ ಶಿಕ್ಷಣ ಮಣ್ಣು ಪಾಲಾಗುತ್ತಿದೆ. ಅವರು ಅತೀ ಹೆಚ್ಚಾಗಿ ರಾಜಕೀಯ ಚಟುವಟಿಕೆಗಳನ್ನು ಮಾಡುತ್ತಿರುವುದರಿಂದ, ರಾಜಕೀಯ ಬೆಂಬಲವಿದೆ. ಹಾಗಾಗಿ ಶಾಲೆಗೆ ಹಾಜರಾಗೋದು ಬಹಳ ಕಡಿಮೆ. ಈ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮಳೆ ಬಂದರೆ ಶಾಲೆ ಸೋರುವ ವ್ಯವಸ್ಥೆಯಲ್ಲಿದೆ. ಇಂತಹ ಹಲವಾರು ಸಮಸ್ಯೆಗಳು, ಈ ಶಾಲೆಯಲ್ಲಿ ಇದ್ದು, ಹಲವು ಬಾರಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವ ಜೊತೆಗೆ ಮನವಿ ಮಾಡಿದ್ದೆವೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೂಡಲೇ ಮುಖ್ಯ ಶಿಕ್ಷಕರನ್ನು ಅಮಾನತ್ತು ಮಾಡಬೇಕು. ಒಂದು ವೇಳೆ ಅವರ ವಿರುದ್ದ ಕ್ರಮ ತೆಗೆದುಕೊಳ್ಳದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಸ್ ಡಿ ಎಮ್ ಸಿ ಅಧ್ಯಕ್ಷ ನಾಗರಾಜ ಆಸಂಗಿ ಆರೋಪ ಮಾಡಿದರು.
ಇದೇ ಸಂದರ್ಭದಲ್ಲಿ ಜೈತುನಬಿ ಮುಲ್ಲಾ ಮಾತಾನಾಡಿದ ಅವರು, ಸುಮಾರು 57 ವಿಧ್ಯಾರ್ಥಿಗಳು ಓದುತ್ತಿದ್ದು, ಇಬ್ಬರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಬಡ ರೈತರ, ಕೂಲಿ ಕಾರ್ಮಿಕರ ಮಕ್ಕಳ ಶಿಕ್ಷಣ ಭವಿಷ್ಯಕ್ಕೆ ಕುತ್ತು ತರುತ್ತಿದ್ದಾರೆ. ಆದರೆ ಅದರಲ್ಲಿ ಮುಖ್ಯ ಶಿಕ್ಷಕ ವೇಣು ಚವ್ಹಾಣ ಶಾಲೆಗೆ ವಾರದಲ್ಲಿ ಒಂದು ಅಥವಾ ಎರಡು ದಿನ ಮಾತ್ರ ಬರುತ್ತಾರೆ ಎಂದು ಆರೋಪ ಮಾಡಿದ್ದರು.
ಈ ಸಂದರ್ಭದಲ್ಲಿ ಸಂಜು ದತ್ತು ಬೋಸಲೆ, ಮಾಳಪ್ಪ ಅರ್ಜುನ ಆಸಂಗಿ, ಶ್ರೀಶೈಲ ಆಸಂಗಿ, ಸಂಜು ಸಂತರಾಮ ಬೋಸಲೆ, ರಮೇಶ ಆಸಂಗಿ, ಸೈಯಬಾಯ್ ಖರಾತ್ , ಇಂದ್ರಬಾಯಿ ಖರಾತ್, ಹಫೀಜಾ ಮುಲ್ಲಾ ಅಂಬಣ್ಣಗೌಡ ಪಾಟೀಲ, ಶಿವಪ್ಪ ಆಸಂಗಿ, ಭೀಮರಾಯ ಕರಾಂಡೆ, ವಿಠ್ಠಲ ಅಸಂಗಿ, ಪವನ ಆಸಂಗಿ, ಮಾಳಪ್ಪ ಸತ್ಯಪ್ಪ ಆಸಂಗಿ , ಸಿದ್ದು ಅಡವಿ ಉಪಸ್ಥಿತರಿದ್ದರು.