ಕಿರುಕುಳ: ಪತ್ನಿ ಕೊಂದು ನೇಣಿಗೆ ಶರಣಾದ ಪತಿ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಮನೆಯವರ ಕಿರುಕುಳ ತಾಳದೆ ಪತ್ನಿಯನ್ನು ಆಕೆಯ ಸೀರೆಯಿಂದಲೇ ಉರುಲು ಹಾಕಿ ಕೊಲೆ ಮಾಡಿ ಕೊನೆಗೆ ತಾನೂ ಮರವೊಂದರ ಟೊಂಗೆಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪೊಲಿಸ್ ಠಾಣೆ ವ್ಯಾಪ್ತಿಯ ತಾಲೂಕಿನ ಗೆದ್ದಲಮರಿ ಗ್ರಾಮದ ತನ್ನದೆ ಜಮೀನೊಂದರಲ್ಲಿ ಸೋಮವಾರ ರಾತ್ರಿ ನಡೆದಿದ್ದು ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಮೇಘಾ ಉರ್ಫ್ ಮಾನಪ್ಪ ಹರನಾಳ (ಹೊಸಮನಿ) (28) ಪತ್ನಿಯಾಗಿದ್ದು ಸಿದ್ದಪ್ಪ ಮಲ್ಲಪ್ಪ ಹರನಾಳ (33). ಘಟನಾ ಸ್ಥಳಕ್ಕೆ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ, ಬಸವನ ಬಾಗೇವಾಡಿ ಡಿಎಸ್ಪಿ ಬಲ್ಲಪ್ಪ ನಂದಗಾಂವಿ, ಮುದ್ದೇಬಿಹಾಳ ಸಿಪಿಐ ಮೆಹಮ್ಮೂದ ಫಸಿಯುದ್ದೀನ್, ಪಿಎಸೈ ಸಂಜಯ್ ತಿಪ್ಪರಡ್ಡಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಕೊಂಡಿದ್ದಾರೆ.
ಕೊಲೆಗೀಡಾದ ಮಾನಮ್ಮಳ ತಾಯಿ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕು ಎಣ್ಣಿ ವಡಿಗೇರಿ ಗ್ರಾಮದ ಗದ್ದೆಮ್ಮ ಬಸಪ್ಪ ಹೊಸಮನಿ ಅವರು ಮೇಘಾಳನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಅಳಿಯ ಸಿದ್ದಪ್ಪ, ಮಗಳು ಮತ್ತು ಅಳಿಯನಿಗೆ ಕಿರುಕುಳ ನೀಡುತ್ತಿದ್ದ ಸಿದ್ದಪ್ಪನ ಸಹೋದರ ಶ್ರೀಕಾಂತ ಮಲ್ಲಪ್ಪ ಹರನಾಳ, ಸಿದ್ದಪ್ಪನ ತಾಯಿ ಶಾಂತಮ್ಮ ಮಲ್ಲಪ್ಪ ಹರನಾಳ ವಿರುದ್ದ ಮುದ್ದೇಬಿಹಾಳ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ.