ಹಳಗುಣಕಿ ಸೇರಿದಂತೆ ತಾಲೂಕಿನಲ್ಲಿ ಸಂಭ್ರಮದ
ಹನುಮಾನ ಜಯಂತಿ
ಇಂಡಿ: ತಾಲೂಕಿನ ಪ್ರಸಿದ್ಧ ಹಳಗುಣಕಿ ಸೇರಿದಂತೆ
ಬೊಳೆಗಾಂವ,ಸಾಲೋಟಗಿ,ತಾಂಬಾ ಸೇರಿದಂತೆ
ತಾಲೂಕಿನ್ಯಾದಂತ ಶ್ರೀ ಹನುಮಾನ ದೇವರ ಜಾತ್ರಾ
ಮಹೋತ್ಸವ ಸಮಿತಿ ವತಿಯಿಂದ ಹನುಮಾನ
ಜಯಂತಿ ಸಂಭ್ರಮದಿಂದ ಆಚರಿಸಲಾಯಿತು.
ಅದಲ್ಲದೆ ಪಟ್ಟಣದ ಹಿರೇಇಂಡಿ, ಕೆಈಬಿ, ಅಗಸಿ ಮಹಾವೀರ ವೃತ್ತ, ಜಿ.ಪಂ, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ವಿವಿಧ ಕಡೆ ಹನುಮಾನ ಜಯಂತಿ ಆಚರಿಸಲಾಯುತು.
ಹಳಗುಣಕಿ ಗ್ರಾಮದಲ್ಲಿ ಬೆಳಗ್ಗೆ 6 ಗಂಟೆಯಿಂದ
ಸಾಯಂಕಾಲ 4 ಗಂಟೆಯ ವರೆಗೆ ಸಕಲ ಸದ್ಭಕ್ತರಿಂದ ದೀರ್ಘ ದಂಡ ನಮಸ್ಕಾರ ಕಾರ್ಯಕ್ರಮ ನಡೆಯಿತು. ನಂತರ ಗೌಡರ ವಾಡೆಯಿಂದ ವಿವಿಧ ವಾಧ್ಯ
ಮೇಳದೊಂದಿಗೆ ಮೊಸರು ಗಡಿಗೆ ಮೆರವಣೆಗೆ,
ಶ್ರೀ ಹನುಮಾನ ದೇವಸ್ಥಾನದಲ್ಲಿ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ, ಪ್ರಸಾದ ವಿತರಣೆ, ಚಿತ್ರ ವಿಚಿತ್ರ ಮದ್ದು ಸುಡುವದು,ಜಂಗಿ ನಿಕಾಲಿ ಕುಸ್ತಿಗಳು ನಂತರ ನೀನು ಸಾಹುಕಾರ ನಾಗು ನಾಟಕ ಪ್ರದರ್ಶನ
ನಡೆಯಿತು.
ಪಟ್ಟಣದ ಹಿರೇ ಇಂಡಿ ದೇವಸ್ಥಾನದಲ್ಲಿ ಬೆಳಗ್ಗೆ
ಅಭಿಷೇಕ, ಪೂಜೆ ಪ್ರಸಾದ ವಿತರಣೆ ನಡೆಯಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ
ಮತ್ತು ಸಮಿತಿಯ ಎಲ್ಲ ಸದಸ್ಯರು, ಅಗಸಿ ದೇವಸ್ಥಾನದಲ್ಲಿ ಸೋಮು ನಿಂಬರಗಿಮಠ,
ಪುರಸಭೆ ಸದಸ್ಯರಾದ ದೇವೆಂದ್ರ ಕುಂಬಾರ,
ಅನೀಲಗೌಡ ಬಿರಾದಾರ, ವಜ್ರಕಾಂತ ಕೂಡಿಗನೂರ,ಮಲ್ಲು ವಾಲಿಕಾರ , ಕೆಈಬಿ ದೇವಸ್ಥಾನದಲ್ಲಿ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎ.ಬಿರಾದಾರ, ಎಇಇ ಎಸ್.ಆರ್.ಮೆಂಡೆಗಾರ, ಸಾರ್ವಜನಿಕ ಆಸ್ಪತ್ರೆಯಲ್ಲಿ ಡಾ|| ಅಮೀತ ಕೋಳೆಕರ, ಡಾ|| ವಿಪುಲ ಕೋಳೆಕರ ಸೇರಿದಂತೆ ಇಲಾಖೆಯ ಎಲ್ಲ ಸಿಬ್ಬಂದಿವರ್ಗದವರು ಪಾಲ್ಗೊಂಡಿದ್ದರು.
ಇಂಡಿ ತಾಲೂಕಿನ ಹಳಗುಣಕಿ ಗ್ರಾಮದಲ್ಲಿ
ಹನುಮಾನ ಜಯಂತಿ ಕಾರ್ಯಕ್ರಮ