ಇಂಡಿ: ಹಬ್ಬ ಹರಿದಿನಗಳಲ್ಲಿ ಹಾಡು, ನೃತ್ಯ, ನಾಟಕ, ಆಟಗಳು ಮತ್ತು ವಿಶೇಷ ಚಟುವಟಿಕೆಗಳು ಹಮ್ಮಿಕೊಳ್ಳೊದು ಸಾಮಾನ್ಯ. ಆದರೆ ಕಳೆದ ಎರಡು ವರ್ಷಗಳಿಂದ ಕರೋನಾ ಎಂಬ ಮಹಾಮಾರಿ ರೋಗದಿಂದ ಸಂತೋಷ ಸಡಗರ ಸಂಭ್ರಮವೇ ಕಿತ್ತುಕೊಂಡಿದೆ. ಆದರೆ ಕರೋನಾ ಎಂಬ ರೋಗ ಮತ್ತೇ ಎಲ್ಲಿ ಲಾಕ್ ಡೌನ್ ಮಾಡುತ್ತೋ ಎಂಬ ಭಯದ ವಾತಾವರಣ ಕೇಳಿಯೇ, ಗ್ರಾಮದ ಯುವಕರು ಹೊಸ ವರ್ಷದ ಪ್ರಯುಕ್ತ ಕ್ರಿಕೆಟ್ ಟೂರ್ನಾಮೆಂಟ್ ಆಯೋಜನೆ ಗೊಳಿಸಿ ಮನರಂಜನೆ ಪಟ್ಟರು.
ತಾಲೂಕಿನ ಹಂಜಗಿ ಗ್ರಾಮದಲ್ಲಿ ಕ್ರಿಕೆಟ್ ಪ್ರಿಮಿಯರ್ ಲೀಗ್ನಲ್ಲಿ ಮೂರು ತಂಡಗಳು ಭಾಗವಹಿಸಿದ್ದವು. ಮೂರು ತಂಡಗಳು ಒಳ್ಳೆಯ ಸ್ಪರ್ಧಾತ್ಮಕ ಆಟ ಪ್ರದರ್ಶನ ನೀಡಿ ಗ್ರಾಮೀಣ ಭಾಗದ ಜನರಿಗೆ ಮನರಂಜನೆ ನೀಡಿದವು. ಆದರೆ ಕೋಹಿನೂರ ಸಿ.ಸಿ ಹಾಗೂ ಡೈಮಂಡ್ ಸಿ.ಸಿ ಮಧ್ಯೆ ರೋಚಕ, ಹಣಾಹಣಿ ನಡೆದು ಕೊನೆಯ ಹಂತದಲ್ಲಿ ಕೋಹಿನೂರ ಸಿ.ಸಿ. ತಂಡ ಜಯಭೇರಿ ಬಾರಿಸಿ ಪ್ರಥಮ ಬಹುಮಾನ ೧೦ ಸಾವಿರ ರೂಪಾಯಿಗಳ ಮೊತ್ತದೊಂದಿಗೆ ಕಪ್ಪನ್ನು ತನ್ನ ಮಡಲಿಗೆ ತೆಗೆದುಕೊಂಡಿತ್ತು. ಎರಡನೆಯ ತಂಡ ೫ ಸಾವಿರ ರೂಪಾಯಿ ಬಹುಮಾನ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ, ಫಯಾಜ ಕಾರಭಾರಿ, ಮೆೃಬುಬ ಕುಣಬಿ, ಅಶೊಕ ಮಾಳಗೆ, ಮಾಳಪ್ಪಾ ತಡಲಗಿ, ಮಹೇಶ ಬಗಲಿ, ಜಾಫರ ಕುಣಬಿ, ಬಾಳು ರಾಠೋಡ, ಬಾಬು ಸಾಹುಕಾರ ಮೆತ್ರಿ, ಗುಂಡುರಾವ ಸಾಗರ, ಕುಮಾರ ಪಾಟೀಲ, ಮಾದೇವ ಸಾವಕಾರ ಕಂಟಿಕಾರ, ಸದಾಶೀವ ಕಾಂಬಳೆ, ಅಜಿತ ಶಿಂದೆ, ಆಶಿಪ್ ಕಾರಭಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.