ವಿಕಲ ಚೇತರನ್ನು ಗೌರವಿಸುದು ನಮ್ಮ ಕರ್ತವ್ಯ
– ಯಶವಂತರಾಯಗೌಡ
ಇಂಡಿ : ವಿಕಲ ಚೇತರನ್ನು ಗೌರವಿಸಬೇಕಾದದ್ದು
ನಾಗರೀಕ ಸಮಾಜದ ಕರ್ತವ್ಯ. ಅವರಿಗೆ ಸರಕಾರ
ಮತ್ತು ಜನ ಸಮುದಾಯ ಅವರ ಬಗ್ಗೆ ಮಾನವಿಯತೆ – ಯಿಂದ ಮತ್ತು ಹೃದಯವಂತಿಕೆಯಿಂದ ಪ್ರೀತಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಪಟ್ಟಣದ ಖೇಡ ಮಹಾವಿದ್ಯಾಲಯದ ಆವರಣದಲ್ಲಿ ವಿಶ್ವ ವಿಕಲಚೇತನ ದಿನಾಚರಣೆ ಕಾರ್ಯಕ್ರಮದಲ್ಲಿ
ಮಾತನಾಡಿದರು. ದೇವರು ಅವರನ್ನು ಒಂದು ಕಡೆ ನ್ಯೂನತೆ ಮಾಡಿರುತ್ತಾನೆ. ಆದರೆ ಅವರಲ್ಲಿ ಸೂಕ್ಷ್ಮತೆ
ಹೆಚ್ಚಿರುತ್ತದೆ. ಅವರನ್ನು ಸಂರಕ್ಷಿಸುವ ಕುಟುಂಬದವರನ್ನು ನಾವು ಋಣಿಯಾಗಿರಬೇಕಾಗುತ್ತದೆ ಅಭಿನಂದಿ – ಸಬೇಕಾಗುತ್ತದೆ ಎಂದರು. ಅನೇಕ ವಿಕಲಚೇತನರು ದೊಡ್ಡ ಸಾಧನೆ ಮಾಡಿದ್ದಾರೆ. ವಿಕಲಚೇತರಿಗೆ ಮಾದರಿಯಾಗಿದ್ದಾರೆ ಎಂದರು. ವಿಕಲಚೇತನರಿಗೆ ಸರಕಾರದಿಂದ 75 ತ್ರಿ ಚಕ್ರ ವಾಹನ ಸೈಕಲ್ ಗಳನ್ನು ವಿತರಿಸಿದರು.ವಿಕಲಚೇತನರಿಗೆ ಭವನ ನಿರ್ಮಾಣಕ್ಕಾ ಜಾಗ ನೀಡುವದಾಗಿ ವಾಗ್ದಾನ ಮಾಡಿದರು.
ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರರು, ಅಧ್ಯಕ್ಷತೆ ಜಿಲ್ಲಾ ವಿಕಲಚೇತನರ ಅಧ್ಯಕ್ಷ ವಿನೋದ ಖೇಡ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕ
ಸಬಲೀಕರಣದ ಅಧಿಕಾರಿ ರಾಜಶೇಖರ ದಹಿವಾಡಗಿ
ಮಾತನಾಡಿದರು.
ಇಒ ಬಾಬು ರಾಠೋಡ,ಪ್ರಾಚಾರ್ಯ ಶಿವರಾಜ
ಹೊನಕಟ್ಟಿ, ಪ್ರಭು ಹೊಸಮನಿ, ಮಲ್ಲಿಕಾರ್ಜುನ
ಉಮರಾಣಿ, ಪರಶುರಾಮ ಭೋಸಲೆ,ಚನ್ನಯ್ಯ
ಹಜೇರಿ, ಮಲ್ಲು ಬಡಿಗೇರ, ಮೌನೇಶ ಬಡಿಗೇರ,
ಪರಮೇಶ್ವರ ಕುಂಬಾರ, ಭೀಮಣ್ಣ ಕವಲಗಿ,
ಪ್ರಶಾಂತ ಕಾಳೆ, ಜಾವೇದ ಮೋಮಿನ್, ಪರಶುರಾಮ ಬಾವಿಕಟ್ಟಿ, ಲಿಂಗರಾಜ ಬಿಸನಾಳ ಮತ್ತಿತರಿದ್ದರು.
ಇಂಡಿ ಪಟ್ಟಣದ ಖೇಡ ಮಹಾವಿದ್ಯಾಲಯದ ಆವರಣದಲ್ಲಿ ವಿಶ್ವ ವಿಕಲಚೇತನ ದಿನಾಚರಣೆ
ಕಾರ್ಯಕ್ರಮದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು.