ಹಂಡೆ ಅರಸ ಹನುಮಪ್ಪ ನಾಯಕ ವೃತ್ತ ಉದ್ಘಾಟನೆ..!
ಇಂಡಿ : ತಾಲೂಕಿನ ನಿಂಬಾಳ ಕೆಡಿ ಗ್ರಾಮದಲ್ಲಿ ಲಿಂಗಾಯತ ಹಂಡೆ ವಜೀರ ಸಮಾಜದ ಐತಿಹಾಸಿಕ ಪುರುಷ ರಾಜಾ ಬಲದ ಹಂಡೆ ಹನುಮಪ್ಪ ನಾಯಕರ
ವೃತ್ತವನ್ನು ಉದ್ಘಾಟಿಸಲಾಯಿತು. ಹಂಡೆ ವಜೀರ ಸಮಾಜ ತಾಲೂಕಾ ಅಧ್ಯಕ್ಷ ಆರ್.ವಿ. ಪಾಟೀಲ ವೃತ್ತವನ್ನು ಉದ್ಘಾಟಿಸಿ ಮಾತನಾಡಿ ಹನುಮಪ್ಪ ನಾಯಕರು ಹಾಗು ಅವರ ವಂಶಸ್ಥರು ಸುಮಾರು 500 ವರ್ಷಗಳ ವರೆಗೆ ರಾಜ್ಯ ಭಾರಮಾಡಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮಕ್ಕೂ ಮುಂಚೆ ಗ್ರಾಮದ ಬೀದಿಗಳಲ್ಲಿ ಹನುಮಪ್ಪ ನಾಯಕರ ಭಾವ ಚಿತ್ರ ಮೆರವಣೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಪರಮಪೂಜ್ಯ ಮಲ್ಲಯ್ಯ ಹಿರೇಮಠ, ನಿವೃತ ಅಭಿಯಂತರ ಸಿ.ಬಿ.ಮಿಂಚನಾಳ,ಗ್ರಾ.ಪಂ ಸದಸ್ಯ ಜ್ಯೋತಿರ್ಲಿಂಗ ಮಿಂಚನಾಳ, ಮಲ್ಲು ಮಿಂಚನಾಳ, ದೇವರಾಜ ಬೆನಕನಹಳ್ಳಿ, ಮಂಜುನಾಥ ಅವರಾದಿ, ಪ್ರೇಮಾನಂದ ತಂಗಡಗಿ, ಸಿದ್ದಾರೂಢ ಶಿವಣಗಿ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಇಂಡಿ ತಾಲೂಕಿನ ನಿಂಬಾಳ ಕೆಡಿ ಗ್ರಾಮದಲ್ಲಿ
ಹನುಮಪ್ಪ ನಾಯಕರ ವೃತ್ತ ಆರ್.ವಿ.ಪಾಟೀಲ
ಉದ್ಘಾಟಿಸಿದರು.