ಲಿಂಗಸೂಗೂರು:ರಾಯಚೂರ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮದಗಲ್ ಪಟ್ಟಣದಲ್ಲಿ ಹೆಚ್.ಕೆ.ಆರ್.ಡಿ.ಬಿ.ಯೋಜನೆಯ ಅನುದಾನದಲ್ಲಿ 3.50.ಕೋಟಿ ರೂಪಾಯಿಗಳ ರಸ್ತೆ ಅಗಲಿಕರಣ ಕಾಮಗಾರಿ ಆರಂಭವಾಗಿದೆ.
ಆದರೆ ಕಾಮಗಾರಿ ನಿರ್ವಹಣೆ ಜವಾಬ್ದಾರಿ ಪಡೆದ ಗುತ್ತಿಗೆದಾರರು ಸರಿಯಾಗಿ ಕಾಮಗಾರಿಯನ್ನು ಮಾಡುತ್ತಿಲ್ಲ.ಅಲ್ದೆ ಇಲಾಖೆಯ ಇಂಜೀನಿಯರ್ ಪ್ರಕಾಶ್ ಕಾಮಗಾರಿ ಸ್ಥಳದಲ್ಲಿರದೆ ಬೇಜವಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ.ಇದರಿಂದಾಗಿ ಕಾಮಗಾರಿ ಕಳಪೆಯಾಗಲು ಕಾರಣವಾಗಿದೆ ಎಂದು ಪುರಸಭೆ ಸದಸ್ಯರಾದ ಎಸ್.ಅಜ್ಮೀರ್,ತಸ್ಲಿಮ್ ಮುಲ್ಲಾ, ಶ್ರೀಕಾಂತ ಪಾಟೀಲ್ ಮುಖಂಡರಾದ ವೀರೇಶ್ ವಡ್ಡರ್,ರಾಘವೇಂದ್ರ ದೇಶಪಾಂಡೆ ಆರೋಪಿಸಿದರು.ಇದರಿಂದ ಕೋಪಗೊಂಡ ಪಿಡಬ್ಲಡಿ ಎಇಇ ಗೋಪಾಲ ರೆಡ್ಡಿ ಗುತ್ತಿಗೆದಾರನ ಮೇಲೆ ಹರಿ ಹಾಯ್ದರು.ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ,ಉತ್ತಮ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ತಾಕೀತು ಮಾಡಿದರು.