440 ನೇ ದಿನದತ್ತ ತಾಂಬಾದ ಗುತ್ತಿಬಸವಣ್ಣ ಹೋರಾಟ..!
ಇಂಡಿ : ತಾಂಬಾ ಗ್ರಾಮದಲ್ಲಿ ನಡೆಯುತ್ತಿರುವ ಗುತ್ತಿಬಸವಣ್ಣ ಏತ ನೀರಾವರಿ ಹೋರಾಟ ಇಂದಿಗೆ 440 ನೇ ದಿನದತ್ತ ಸಾಗಿದೆ, ಆದರೂ ಮುಖ್ಯ ಬೇಡಿಕೆಯಾದ ಬಳಗಾನೂರ ಏತ ನೀರಾವರಿ ಜಾರಿಯಾಗಿ ಶಾಶ್ವತ ನೀರಿನ ಕೂಗು ಇನ್ನೂ ಜೀವಂತವಾಗಿದೆ. ಚುನಾವಣೆ ಮುಗಿದು ಸರ್ಕಾರ ಬದಲಾವಣೆ ಆಗಿದೆ. ಈ ಹೊಸ ಸರ್ಕಾರ ಕೂಡಲೇ ನಮ್ಮ ಬೇಡಿಕೆಗೆ ಸ್ಪಂದಿಸಿ ನಮ್ಮ ಬೇಡಿಕೆ ಈಡೇರಿಸಿ ಎಂದು ಗುತ್ತಿಬಸವಣ್ಣ ಹೋರಾಟ ಸಮಿತಿ ಸದಸ್ಯ ಹಾಗೂ ಕರವೇ ಅಧ್ಯಕ್ಷ ಶಿವರಾಜ್ ಕೆಂಗನಾಳ ಅಗ್ರಹಿಸಿದ್ದಾರೆ. ಈ ಸಮಯದಲ್ಲಿ ಹೋರಾಟ ಸಮಿತಿ ಸದಸ್ಯರು ಮಹದೇವ್ ಮುಲಿಮನಿ, ಬಸವರಾಜ ಹಿರೇಕುರಬರ, ಚಂದ್ರಮ ಮುಲಿಮನಿ, ಮುಂಜಿ, ಜೇವುರ್, ಪೂಜಾರಿ ಅನೇಕ ರೈತರು ಇದ್ದರು.