ಸಿರವಾರ: ತಾಲೂಕು ಗುತ್ತಿಗೆದಾರರ ಸಂಘವನ್ನು ರಚಿಸಲಾಗಿದ್ದು ಅಧ್ಯಕ್ಷರನ್ನಾಗಿ ದೇವರಾಜ್ ಸ್ವಾಮಿ ಹಿರೇಮಠ್ ಅವರನ್ನು ಆಯ್ಕೆ ಮಾಡಲಾಯಿತು.
ಶನಿವಾರ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಿ ಪದಾಧಿಕಾರಿಗಳನ್ನು ಘೋಷಿಸಲಾಯಿತು.
ಗೌರವ ಸಲಹೆಗಾರರಾಗಿ ನರಸಿಂಹರಾವ್ ಕುಲಕರ್ಣಿ, ಗೌರವಾ ಧ್ಯಕ್ಷರಾಗಿ ಜೆ. ಶಿವರಾಮ್ ರೆಡ್ಡಿ, ಉಪಾಧ್ಯಕ್ಷರಾಗಿ ಮರಿಯಪ್ಪ ಕವಿತಾಳ, ಬಸವರಾಜ, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಮಲoಗ್, ತಾಂತ್ರಿಕ ಸಲಹೆಗಾರರಾಗಿ ಜೆ. ಬಸನಗೌಡ ಪಾಟೀಲ್, ಸಂಘಟನಾ ಕಾರ್ಯದರ್ಶಿ ನಿಂಗಪ್ಪ, ಕಾರ್ಯದರ್ಶಿ ಬಸನಗೌಡ, ಸಹ ಕಾರ್ಯದರ್ಶಿ ಮಲ್ಲಪ್ಪ, ಖಜಾoಚಿಯಾಗಿ ರವಿರಾಜ್ ಕಳಸ ರವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗುತ್ತಿಗೆದಾರರ ಜಿಲ್ಲಾ ಸಮಿತಿಯ ಮುಖ್ಯಸ್ಥರಾದ ನಾಗಪ್ಪ ಗಿರಣಿ, ಬಸ್ಸಪ್ಪ ಕಂದಕಲ್ಲ, ಎಮ್. ನಾಗರಾಜಗೌಡ, ಮಲ್ಲಿಕಾರ್ಜುನ ಮರಕಮ್ ದಿನ್ನಿ ಸೇರಿದಂತೆ ಇತರರು ಇದ್ದರು.