ಗುರುಭೂಷಣ ರಾಜ್ಯ ಪ್ರಶಸ್ತಿ ಪ್ರದಾನ
ಇಂಡಿ: ಇದೇ ಅಕ್ಟೋಬರ್ 16 ರಂದು ಬೆಂಗಳೂರಿನ ಇಂಡೋಗ್ಲೋಬ್ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಬೆಂಗಳೂರಿನ ಸೂರ್ಯ ಫೌಂಡೇಶನ್(ರಿ) ಹಾಗೂ ಸ್ಪಾರ್ಕ್ ಅಕಾಡೆಮಿ ವತಿಯಿಂದ ಕೊಡಮಾಡುವ 2024 ನೇ ಸಾಲಿನ ‘ಗುರುಭೂಷಣ’ ಪ್ರಶಸ್ತಿಯನ್ನು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯ ಇಂಗ್ಲೀಷ್ ಶಿಕ್ಷಕ ಸಂತೋಷ ಬಂಡೆ ಅವರಿಗೆ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸೂರ್ಯ ಫೌಂಡೇಶನ್(ರಿ) ಹಾಗೂ ಸ್ಪಾರ್ಕ್ ಅಕಾಡೆಮಿಯ ಅಧ್ಯಕ್ಷ ಸೋಮೇಶ ನವೋದಯ, ಇಂಡೋಗ್ಲೋಬ್ ಸಂಸ್ಥೆಯ ಅಧ್ಯಕ್ಷ ಟಿ ಎಂ ಗೌಡ, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯ ಅಧ್ಯಕ್ಷ ಪಿ ಮಹೇಶ್, ತಾಂತ್ರಿಕ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ನಾಯಕ್, ಮೈಂಡ್ ಕೋಚ್ ಮೆಮೊರಿ ಟ್ರೇನರ್ ವೇಣುಗೋಪಾಲ್ ಸಿ ವಿ, ಇಂಡೋಗ್ಲೋಬ್ ಸಂಸ್ಥೆಯ ಕಾರ್ಯದರ್ಶಿ ಸಂಗೀತಾ ಎಸ್ ಬಿ, ಸಿಇಒ ಧನರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



















