ಆಧ್ಯಾತ್ಮದ ಅರಿವು ಬಾಳಿಗೆ ಸಂಜೀವಿನಿ- ಶಿವಬಸವ
ಶ್ರೀಗಳು
ಇಂಡಿ :ಪರಿಶುದ್ಧವಾದ ಪವಿತ್ರವಾದ ಜೀವನ
ರೂಪಿಸಿಕೊಳ್ಳಲು ಆಧ್ಯಾತ್ಮ ಜ್ಞಾನದ ಅರಿವು ಬೇಕು.
ಆಧ್ಯಾತ್ಮದ ಜ್ಞಾನ ಬದುಕನ್ನು ವಿಕಾಸಗೊಳಿಸಿ ಸನ್ಮಾರ್ಗದತ್ತ ಕರೆತರಲು ಸಹಕಾರಿಯಾಗುತ್ತದೆ. ಮಾನವ ಧರ್ಮಕ್ಕೆ ಜಯವಾಗಲಿ , ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಪಾಲಿಸಬೇಕಿದೆ. ಇಂದು ಮಾನವ ಧರ್ಮ ಉಳಿದರೆ ಎಲ್ಲ ಧರ್ಮಗಳು ಉಳಿಯಲು ಸಾದ್ಯ
ಎಂದು ದಿವ್ಯ ಸಾನಿಧ್ಯ ವಹಿಸಿದ ಖೇಡಗಿ ವಿರಕ್ತಮಠದ
ಶಿವಬಸವ ರಾಜೇಂದ್ರ ಶ್ರೀಗಳು ಹೇಳಿದರು.
ಅವರು ತಾಲೂಕಿನ ಗುಬ್ಬೆವಾಡ ಗ್ರಾಮದಲ್ಲಿ ಗುಪ್ತಾಯಿದೇವಿ ಜಾತ್ರಾ ಮಹೋತ್ಸವ ಮತ್ತು
ನೂತನವಾಗಿ ನಿರ್ಮಿಸಿದ ಭವ್ಯಗೋಪುರ
ಕಳಸಾರೋಹಣ ಕಾರ್ಯಕ್ರಮದ ಸಾನಿದ್ಯ ವಹಿಸಿ
ಮಾತನಾಡಿದರು. ಮಳೆ ಬೆಳೆ ಚೆನ್ನಾಗಿ ಬಂದು ನಾಡು
ಸುಭೀಕ್ಷವಾಗಬೇಕಾದರೆ ಪ್ರತಿಯೊಬ್ಬರು ಧರ್ಮ ಮಾರ್ಗದಲ್ಲಿ ಸಾಗಬೇಕು ಎಂದರು.
ದೇವಸ್ಥಾನ ಸಮಿತಿಯ ಸತೀಶ ಚಾಂದಕವಟೆ
ಮಾತನಾಡಿ ಮನಸ್ಸು ಶುದ್ದವಾಗಿಟ್ಟುಕೊಳ್ಳಬೇಕು.
ಭಕ್ತರಲ್ಲಿ ಭಕ್ತಿ ಪ್ರತಿಷ್ಠಾಪನೆಯಾದಾಗ ಮಾತ್ರ ಅದಕ್ಕೆ ನಿಜವಾದ ಅರ್ಥ ಬರುತ್ತದೆ. ದೇಗುಲಗಳು ಮನಸ್ಸಿಗೆ ನೆಮ್ಮದಿ ನೀಡುವ ಸ್ಥಳ ಎಂದರು.
ದೇವಸ್ಥಾನ ಸಮಿತಿಯ ಧರ್ಮಣ್ಣ ಮರಗೂರ,
ಕಾಶಿನಾಥ ಲಚ್ಯಾಣ, ಶಿವಲಿಂಗ ಲಚ್ಯಾಣ, ದೀಲಪ್ಪ ಮರಗೂರ, ಬಸವರಾಜ ಹೆಗೊಂಡೆ, ಶಿವರಾಯ ಕೋಳಿ ಮಾತನಾಡಿದರು.
ವೇದಿಕೆಯ ಮೇಲೆ ಮಲ್ಲಯ್ಯ ಮಠಪತಿ, ಬಸಲಿಂಗಯ್ಯ ಮಠಪತಿ, ಸಿದ್ದರಾಮ ಚಾಂದಕವಠೆ, ಗ್ರಾ.ಪಂ ಅಧ್ಯಕ್ಷ ಸುರೇಶ ಆಲೂರ,ಉಪಾಧ್ಯಕ್ಷ ಆನಂದರಾವ ಚಾಂದಕವಟೆ, ಸದಸ್ಯರಾದ ಅಮೃತ ಮರಗೂರ, ಸಿದ್ದು ಕೋಲಿ, ಹಸನಸಾಬ ಕಸಾಯಿ, ಚಂದ್ರಕಾಂತ ಮರಗೂರ,
ಸಿದ್ದಾರೂಢ ಮರಗೂರ, ಅಶೋಕ ಧೂಳೆ , ಪಂಚಪ್ಪ
ಮರಗೂರ ಮತ್ತಿತರಿದ್ದರು.
ಇಂಡಿ ತಾಲೂಕಿನ ಗುಬ್ಬೆವಾಡ ಗ್ರಾಮದಲ್ಲಿ
ಗುಪ್ತಾಯಿದೇವಿ ಜಾತ್ರಾ ಮಹೋತ್ಸವ ಮತ್ತು
ನೂತನವಾಗಿ ನಿರ್ಮಿಸಿದ ಭವ್ಯಗೋಪುರ
ಕಳಸಾರೋಹಣ ಕಾರ್ಯಕ್ರಮದಲ್ಲಿ ಕುಂಭ
ಹೊತ್ತ ಮಹಿಳೆಯರು ಪಾಲ್ಗೊಂಡಿದ್ದರು.