ಇಂಡಿಯಲ್ಲಿ ಅದ್ದೂರಿ ಸ್ವಾತಂತ್ರೋತ್ಸವ : ಅಗ್ನಿಶಾಮಕ ಪೋಲಿಸರಿಗೆ ಸನ್ಮಾನ
ಇಂಡಿ : ಇತ್ತಿಚೆಗೆ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳುವೆ ಬಾವಿಯಲ್ಲಿ ಚಿಕ್ಕ ಬಾಲಕ ಬಿದ್ದಿರುವ ದುರ್ಘಟನೆಯೊಂದು ನಡೆದಿತ್ತು. ಆ ಹಿನ್ನೆಲೆಯಲ್ಲಿ ಅತ್ಯಂತ ಶ್ಲಾಘನೀಯ ಕಾರ್ಯ ಮಾಡಿರುವ 7 ಜನ ಅಗ್ನಿ ಶಾಮಕ ಪೋಲಿಸರಿಗೆ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಸನ್ಮಾನಿಸಲಾಯಿತು.
ವಿಜಯಪುರ ರಸ್ತೆಯ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ 78 ನೇ ಸ್ವತಂತ್ರೋತ್ಸವ ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಹಾಗೂ ಇತರೆ ಇಲಾಖೆ ಸಿಬ್ಬಂದಿ ಅವರಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಕಂದಾಯ ಉಪ ವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅವರಿಂದ ಸನ್ಮಾನಿಸಲಾಯಿತು.
ಅಗ್ನಿಶಾಮಕ ಪೋಲಿಸ್ ಮಲ್ಲಿಕಾರ್ಜುನ ಗೊಟ್ಯಾಳ, ಶರಣಬಸಪ್ಪ ಹೊನವಾಡ, ಅನೀಲ ಚವ್ಹಾಣ, ಚಂದ್ರಕಾಂತ ಪವಾರ, ಮಹ್ಮದ ಅಲಿ ಬಂಥನಾಳ, ಶಿವನಗೌಡ ಬಿರಾದಾರ, ಇಂಡಿಕರ ಮುಬಾರಕ್ ಅವರನ್ನು ತಾಲೂಕು ಅಡಳಿತ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಹಶಿಲ್ದಾರ ಬಿಎಸ್ ಕಡಕಭಾವಿ, ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ ಹಾಗೂ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಇತರೆ ತಾಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.