ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರೆಂದು ಪರಿಗಣಿಸಿ- ಯಶವಂತರಾಯಗೌಡ ಪಾಟೀಲ್:
ಇಂಡಿ : ಗ್ರಾಮ ಸಹಾಯಕರನ್ನು ಡಿ ದರ್ಜೆಯ ನೌಕರರೆಂದು ಪರಿಗಣಿಸಲು ಸರಕಾರ ಆಸಕ್ತಿ ಹೊಂದಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಕಲಾಪದಲ್ಲಿ ಧ್ವನಿಮೊಳಗಿಸಿದರು.
ಚುಕ್ಕೆ ಗುರುತಿಲ್ಲದ ಪ್ರಶ್ನೆ ಮೂಲಕ ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ, ರಾಜ್ಯ ಸರಕಾರ ಗ್ರಾಮ ಸಹಾಯಕರಿಗೆ ನೀಡುತ್ತಿರುವ ವೇತನ / ಗೌರವ ಧನ ಹಾಗೂ ಕುಟುಂಬದ ಜೀವನ ನಿರ್ವಹಣೆ, ಭದ್ರತೆ ಬಗ್ಗೆ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕಂದಾಯ ಸಚಿವರಿಗೆ ಪ್ರಶ್ನೆ ಮಾಡಿದರು.
ಈ ಸಂದರ್ಭದಲ್ಲಿ ಉತ್ತರಿಸಿದ ಕಂದಾಯ ಸಚಿವರು ರಾಜ್ಯದಲ್ಲಿ ಪ್ರಸ್ತುತ ಒಟ್ಟು 10,450 ಗ್ರಾಮ ಸಹಾಯಕರ ಹುದ್ದೆ ಮಂಜೂರಾಗಿದ್ದು, ಈ ಸಧ್ಯಕ್ಕೆ 9,884 ಗ್ರಾಮ ಸಹಾಯಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಗ್ರಾಮ ಸಹಾಯಕರು ಗ್ರಾಮ ಮಟ್ಟದ ಆಡಳಿತ ಅಧಿಕಾರಿಗಳಿಗೆ ಸರಕಾರದ ಕೆಲಸ ಕಾರ್ಯಗಳಲ್ಲಿ ಸಹಕಾರ ನೀಡುವುದು. ಜನನ ಮರಣ ಜೊತೆಗೆ ಸರಕಾರಿ ಅಧಿಕಾರಿಗಳಿಗೆ ಅಗತ್ಯವಾದ ಸ್ಥಳೀಯ ಮಾಹಿತಿ ನೀಡುವುದಾಗಿದೆ. ಇನ್ನೂ ಪ್ರತಿ ತಿಂಗಳು 13,000 ಮಿತವೇತನ ನಿಗದಿ ಪಡಿಸಲಾಗಿದೆ. ಡಿ ದರ್ಜೆಯ ನೌಕರರು ಎಂದು ಪರಿಗಣಿಸಲು ಸರಕಾರದ ಮುಂದೆ ಪ್ರಸ್ತಾವನೆ ಇರುವುದಿಲ್ಲ ಎಂದು ಉತ್ತರಿಸಿದರು.